Tuesday, September 23, 2025

Latest Posts

‘ನೀವು ದೇವೇಗೌಡ ಬದುಕಿದ್ದಾಗ ಈ ಶರೀರಕ್ಕೆ ನೋವನ್ನು ಕೊಡಬೇಡಿ’

- Advertisement -

ಹಾಸನ: ಹಾಸನದ 80 ಅಡಿ ರಸ್ತೆಯಲ್ಲಿ ಜೆಡಿಎಸ್ ಪ್ರಚಾರ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಬಾರಿ ರಾಹುಲ್‌ಗಾಂಧಿ ಅವರು ದೇವೇಗೌಡರು ಭಾರತೀಯ ಜನತಾ ಪಾರ್ಟಿಯ ಬಿ ಟೀಂ ಅಂತ ಹೇಳಿದ ಒಂದೇ ಒಂದು ಮಾತಿನಿಂದ ಒಂದು ಸಣ್ಣ ತಪ್ಪು ಆಯ್ತು. ಒಂದೇ ಒಂದು ಮತವನ್ನು ಪ್ರಕಾಶ್ ಅವರಿಗೆ ಕಳೆದ ಸಾರಿ ಕೊಡಲಿಲ್ಲ. ಸುಮಾರು 26 ಸಾವಿರ ಮತಗಳು ಬಿಜೆಪಿಗೆ ಹೋಯ್ತು, ಪ್ರಕಾಶ್ ಅವರು ಸೋತರು. ನಿಮ್ಮಲ್ಲಿ ವಿನಂತಿ ಮಾಡ್ತೀನಿ. ಹಾಸನ ಜಿಲ್ಲೆ, ಇಡೀ ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ಬರಬೇಕು ಅನ್ನೋದು ರೇವಣ್ಣ ಅವರ ಕನಸು ಎಂದು ಹೇಳಿದ್ದಾರೆ.

ಅಲ್ಲದೇ, ವಿಮಾನ ನಿಲ್ದಾಣ ತರಬೇಕು ಅಂತ 1200 ಕೋಟಿ ಮಂಜೂರಾತಿ ಕೊಟ್ವಿ. ಅದನ್ನು ಸೈಟ್ ಮಾಡ್ತಾ ಇದ್ದಾರೆ ಈಗ. ತೀರ್ಮಾನ ಮಾಡಿ, ನೀವು ತೀರ್ಮಾನ ಮಾಡಿ. ತೀರ್ಮಾನ ಮಾಡೋರು ನೀವು. ಹಾಸನ ಅಭಿವೃದ್ಧಿ ಮಾಡ್ತಿರೋದು ರೇವಣ್ಣ ಅವರಿಗಲ್ಲ. ನಮ್ಮ ಯೋಜನೆ, ನಾವು ಬದುಕಬೇಕು ಅನ್ನೋದು ಅಷ್ಟೇ ಅಲ್ಲಾ. ನಮ್ಮ ರಾಜ್ಯದ ಪ್ರತಿಯೊಬ್ಬ ಜನ ಬದುಕಬೇಕು ಅಂತ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆ ಎಂದು ದೇವೇಗೌಡರು ಹೇಳಿದ್ದಾರೆ.

ನಾನು ಮುಸ್ಲಿಂರಲ್ಲಿ ವಿನಂತಿ ಮಾಡ್ತಿನಿ, ನಾನು ಜಾತಿವಾದಿ ಅಲ್ಲ. ಈ ದೇಶದಲ್ಲಿ ನನ್ನ ಜಾತಿಗೆ ಕೊಟ್ಟ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಟ್ಟಿದ್ದೇನೆ. ನಾಳೆ ಕಾರ್ಯಕ್ರಮ ಮುಂದುವರಿದರೂ ಚಿಂತೆ ಇಲ್ಲ. ಆ ವ್ಯಕ್ತಿಯ ಬಗ್ಗೆ ನನ್ನ ಬಾಯಲ್ಲಿ ಮಾತನಾಡಲ್ಲ. ಈ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿದ್ದಾನೆ ಆ ವ್ಯಕ್ತಿ. ಕುಮಾರಸ್ವಾಮಿ ಅವರು ತಜ್ಞರಿಂದ ಮಾಹಿತಿ ಪಡೆದು ಚನ್ನಪಟ್ಟಣ ಕೆರೆಗೆ 144 ಕೋಟಿ ರೂಪಾಯಿ ವಿನೂತನವಾದಂತಹ ಉದ್ಯಾನವನ ಮಾಡಲು, ಪ್ರವಾಸಿ ತಾಣ ಮಾಡಲು ನಿರ್ಧರಿಸಿದ್ದರು. ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಈ ಜಿಲ್ಲೆಯ ಪ್ರಗತಿಗೆ ಮಾರಕವಾಗಿದ್ದಾರೆ ಅದು ಅಂತ್ಯ ಆಗಬೇಕು. ಇದರಲ್ಲಿ ಯಾವುದೇ ದಯಾ, ದಾಕ್ಷಿಣ್ಯ ಇಲ್ಲ. ವಿಮಾನ ನಿಲ್ದಾಣಕ್ಕೆ 1200 ಕೋಟಿ ಮಂಜೂರಾತಿ ಮಾಡಿದ್ರೆ ಅದನ್ನು ನಿರ್ಣಾಮ ಮಾಡಿ ಮಾರಟ ಮಾಡುವ ವ್ಯಕ್ತಿಯನ್ನು ಮತ್ತೆ ನೋಡಬಾರದು. ಇಂತಹವರನ್ನು ತೆಗೆರಿ, ನೀವು ದೇವೇಗೌಡ ಬದುಕಿದ್ದಾಗ ಈ ಶರೀರಕ್ಕೆ ನೋವನ್ನು ಕೊಡಬೇಡಿ ನೀವು ಎಂದು ಹೇಳಿದ್ದಾರೆ.

ಸ್ವರೂಪ್ ನನ್ನ ಮೂರನೇ ಮಗ ಅಂತ ಭವಾನಿ ಹೇಳಿದ್ದಾರೆ. ಯಾವುದೇ ಕಾರಣದಿಂದ, ಯಾವುದೇ ಸಮಾಜದವರಿರಲಿ ಒಂದೊಂದು ಮತ ಈ ಜಿಲ್ಲೆಯ ಸರ್ವನಾಶಕ್ಕೆ ಕಾರಣವಾಗಿರುವ ಯಾರೇ ಇರಲಿ ತೆಗಿಲೇಬೇಕು. ರಾಹುಲ್‌ಗಾಂಧಿ ನನಗೆ ಸರ್ಟಿಫಿಕೇಟ್ ಕೊಡ್ತಾರೆ. ಮೋದಿ ಬಂದು ಬೇಲೂರಿನಲ್ಲಿ ಬಾಷಣ ಮಾಡ್ತಾರೆ. ನನಗೆ 92 ಆಯ್ತು ಅಂತ ನಾನು ಕುಳಿತುಕೊಳ್ಳಲ್ಲ ಹುಟ್ಟು ಹೋರಾಟಗಾರ ನಾನು. ಪಂಜಾಬ್‌ನಲ್ಲಿ ಭತ್ತದ ತಳಿಗೆ ನನ್ನ ಹೆಸರು ಇಟ್ಟಿದ್ದಾರೆ. ಭಾರತರತ್ನಕ್ಕಿಂತ ಹೆಚ್ಚಿನ ಖುಷಿ ತಂದಿದೆ ಎಂದು ದೇವೇಗೌಡರು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮ್ಮನ್ನ ಕೈ ಮುಗಿದು, ಕೈ ಚಾಚಿ ಕೇಳ್ತಿನಿ. ಸ್ವರೂಪ್ ಹತ್ರ, ಅವರ ತಂದೆ, ಅವರ ತಾಯಿ ಹತ್ರ ದುಡ್ಡು ಇದಿಯೋ ಇಲ್ವೋ ಗೊತ್ತಿಲ್ಲ. ಯಾವುದೇ ಕಾರಣದಿಂದ ಆ ವ್ಯಕ್ತಿ ಗೆಲ್ಲಲು ಬಿಡಕೂಡದು, ಏನು ಬೇಕಾದರೂ ಆಗಲಿ. ಹಾಸನದ ಜನ ಬದುಕಬೇಕು. ಹಾಸನಕ್ಕೆ ಪ್ರಿಸ್ಟಿಜೀಯಸ್ ಐಐಟಿ ತರಬೇಕು ಅಂತ ಮೋದಿ ಮನೆ ಬಾಗಿಲಗೆ ಹೋಗಿದ್ದೆ. ಇವತ್ತಿನವರೆಗೂ ಆ ಮನುಷ್ಯನಿಗೆ ಮನಸ್ಸು ಬರಲಿಲ್ಲ, ಕಾಲೊಂದು ಕಟ್ಟಿಲ್ಲ ಅವರಿಗೆ. ಕೆಲವೊಂದು ಹಳ್ಳಿಹಳ್ಳಿಗಳಿಗೆ ನನಗೆ ಹೋಗುವ ಮನಸ್ಸಿದೆ ಕಾಲ ಇಲ್ಲ. ಒಂದೊಂದು ಹಳ್ಳಿ ಹಳ್ಳಿಗೆ ಹೋಗಿ, ಮನೆ ಮನೆಗೆ ಹೋಗಿ ಕಾಲಿಗೆ ಬಿದ್ದು ಸ್ವರೂಪ್‌ಗೆ ಮತ ಕೇಳಿ. ಇನ್ನೊಬ್ಬನ ಹೆಸರು ಹೇಳಲು ನನ್ನ ನಾಲಿಗೆಯಿಂದ ಸಾಧ್ಯವಿಲ್ಲ. ನನ್ನ ಮುಸಲ್ಮಾನ್ ಬಾಂಧವರ ಒಂದೇ ಒಂದು ಮತ ಬೇರೆಯವರಿಗೆ ಹೋಗಬಾರದು.

ಯಾವ ವ್ಯಕ್ತಿ ನನ್ನ ಜಿಲ್ಲೆಯ ಅಭಿವೃದ್ಧಿ, ಪ್ರಗತಿಗೆ ಪ್ರಬಲವಾದ ಪೆಟ್ಟನ್ನು ಕೊಟ್ಟಿದ್ದಾನೆ ಅದು ಅಂತ್ಯವಾಗಲೇಬೇಕು. ಮೇ.13 ರಂದು ನಿಮ್ಮೆಲ್ಲರಿಗೂ ತಲೆ ಬಾಗಿ ಶರಣಾಗತಿ ಆಗಿ ನಮಸ್ಕಾರ ಮಾಡ್ತಿನಿ. ವ್ಯಕ್ತಿಗತ ಏನಿದೆ, ಎಷ್ಟು ವರ್ಷ ಬದುಕಿರ್ತಿನಿ ಎಂದು ಹೇಳಿದರು.

ಮೇ.10 ಮತಗಟ್ಟೆ ಸೀಲ್ ಮಾಡ್ತಾರೆ ಪ್ರತಿಯೊಬ್ಬರು ಎಚ್ಚರವಾಗಿರಿ. ಅವರು ಐವತ್ತು ಸಾವಿರ ಎಷ್ಟೇ ಖರ್ಚು ಮಾಡಲಿ, ಲಕ್ಷ ಖರ್ಚು ಮಾಡಲಿ ಅವರ ಅಂತ್ಯವನ್ನು ಈ ಎರಡು ಕಣ್ಣಿನಲ್ಲಿ ನೋಡಬೇಕು. ತಲೆ ಬಾಗಿ ಕೈಚಾಕಿ ಕೇಳ್ತೇನೆ ಬೇಡ, ಬೇಡ ಇಂತಹ ವ್ಯಕ್ತಿ ಇಂತಹ ವ್ಯಕ್ತಿಯನ್ನು ತೆಗೆಯಲೇಬೇಕು ಎಂದು ದೇವೇಗೌಡರು ಹೇಳಿದ್ದಾರೆ.

‘ಹೇಗೂ ಸುಳ್ಳು ಹೇಳ್ತೀರಾ, ಹೊಸ ಸುಳ್ಳುಗಳನ್ನಾದರೂ ಹೇಳೋಕ್ಕಾಗೊಲ್ವಾ ?’

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್ಡಿಕೆ

“ಕೊರಗಜ್ಜ” ಚಿತ್ರ ದಲ್ಲಿ ಬರುವ “ಗುಳಿಗ”ದೈವಕ್ಕೆ ನಿರ್ದೇಶಕರಿಂದ ಕ್ಷೇತ್ರ ನಿರ್ಮಾಣ, ಅದ್ದೂರಿಯ ಕೋಲ ಸೇವೆ

- Advertisement -

Latest Posts

Don't Miss