Tuesday, January 7, 2025

Latest Posts

ಇನ್ಮುಂದೆ ಮದುವೆಯಾಗದ ಜೋಡಿಗಳಿಗೆ OYOನಲ್ಲಿ ಎಂಟ್ರಿ ಇಲ್ಲ..

- Advertisement -

News: ಇಷ್ಟು ದಿನ ಓಯೋನಲ್ಲಿ ಯಾರು ಬರುತ್ತಾರೋ ಅವರೆಲ್ಲರಿಗೂ ರೂಮ್ ನೀಡಲಾಗುತ್ತಿತ್ತು. ಸ್ವತಂತ್ರವಾಗಿ ಇರಲಾಗದವರು, ಓಯೋನಲ್ಲಿ ಬಂದು, ದೈಹಿಕ ಸುಖ ತೀರಿಸಿಕೊಳ್ಳುತ್ತಿದ್ದರು. ವ್ಯಾಲೆಂಟೈನ್ಸ್ ಡೇ, ನ್ಯೂ ಇಯರ್ ಸೇರಿ ಕೆಲವು ಆಯ್ದ ದಿನಗಳಲ್ಲಿ ಓಯೋ ರೂಮ್‌ ಹೆಚ್ಚು ಬುಕ್ ಆಗುತ್ತಿತ್ತು. ಆದ್ರೆ ಓಯೋ ರೂಲ್ಸ್ ಬದಲಾಯಿಸಿದ್ದು, ಇನ್ನು ಮುಂದೆ ವಿವಾಹವಾಗದ ಜೋಡಿಗಳಿಗೆ ಓಯೋನಲ್ಲಿ ಎಂಟ್ರಿ ಬಂದ್ ಆಗಲಿದೆ.

ಕಾಲೇಜು ಮಕ್ಕಳು ಕೂಡ, ತಮ್ಮ ಬಾಯ್‌ಫ್ರೆಂಡ್, ಗರ್ಲ್ ಫ್ರೆಂಡ್ ಜೊತೆ, ಓಯೋಗೆ ಬರುತ್ತಿದ್ದರು. ಅಲ್ಲದೇ, ಹಾಸ್ಟೇಲ್, ಪಿಜಿಯಲ್ಲಿ ಇರುವ ಮಕ್ಕಳು ಕೂಡ ಓಯೋಗೆ ಬರುತ್ತಿದ್ದರು. ಆನ್‌ಲೈನ್‌ನಲ್ಲೇ ರೂಮ್ ಬುಕ್ ಮಾಡಿ, ಚೆಕ್‌ ಇನ್ ಆಗುತ್ತಿದ್ದರು. ಆದರೆ ಇನ್ನು ಮುಂದೆ ಹಾಗಲ್ಲ. ನೀವು ಚೆಕ್ ಇನ್ ಆಗುವಾಗ, ಇಬ್ಬರ ಮಧ್ಯೆ ಏನು ಸಂಬಂಧ ಅನ್ನೋದನ್ನು ತೋರಿಸಬೇಕು. ಅವರೇನಾದರೂ ಅವಿವಾಹಿತರು ಆಗಿದ್ದಲ್ಲಿ, ಅವರಿಗೆ ಓಯೋನಲ್ಲಿ ಎಂಟ್ರಿ ಇರುವುದಿಲ್ಲ.

ದೇಶದಲ್ಲಿ ಮೊದಲು ಮೀರತ್‌ನಲ್ಲೇ ಓಯೋ ಓಪನ್ ಆಗಿದ್ದು. ಹಾಗಾಗಿಯೇ ಅಲ್ಲಿಂದಲೇ, ಈ ನಿಯಮ ಜಾರಿ ಮಾಡಲಾಗುತ್ತಿದೆ. ಕೆಲ ದಿನಗಳಲ್ಲಿ ಎಲ್ಲ ಓಯೋ ರೂಮ್‌ಗಳಲ್ಲೂ ಈ ನಿಯಮ ಜಾರಿಗೆ ತರಲಾಗುತ್ತದೆ. ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವ ಜೊತೆಗೆ, ನಾಗರಿಕ ಸಮಾಜದ ಬೇಡಿಕೆಗಳನ್ನು ಕೇಳುವುದು ಕಂಪನಿ ಕರ್ತವ್ಯವೆಂದು ಓಯೋ ತಿಳಿಸಿದೆ.

- Advertisement -

Latest Posts

Don't Miss