Friday, December 13, 2024

Latest Posts

Bengaluruನಲ್ಲಿ ಶಾಲಾ ಕಾಲೇಜುಗಳ ಬಳಿ ಇಂದಿನಿಂದ ಫೆ. 22ರ ವರೆಗೆ ನಿಷೇದಾಜ್ಞೆ ಜಾರಿ..!

- Advertisement -

ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ ಶಾಲಾ-ಕಾಲೇಜುಗಳ ಸಮೀಪದ 200 ಮೀಟರ್ ಅಂತರದಲ್ಲಿ ನಿಷೇದಾಜ್ಞೆಯನ್ನು ಜಾರಿಮಾಡಿದ್ದಾರೆ. ಹಿಜಾಬ್ ಹಾಗೂ ಕೇಸರಿ ಶಾಲು (Hijab and saffron shawl) ಕುರಿತಂತೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ವಿವಾದ ಈಗ ಕೋರ್ಟ್(court) ನಲ್ಲಿ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ನ ಏಕ ಪೀಠ ನ್ಯಾಯಾಧೀಶರಾದ ಕೃಷ್ಣ ಎಸ್ ದೀಕ್ಷಿತ್ (Justice Krishna S Dixit) ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವಂತೆ ರಿಜಿಸ್ಟರ್(register) ಗೆ ತಿಳಿಸಿದ್ದಾರೆ. ಈ ಪ್ರಕರಣ ಇನ್ನು ವಿಚಾರಣೆ ಯಲ್ಲಿರುವುದರಿಂದ ಬೆಂಗಳೂರಿನ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೇ ಇರಲು ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ (Police Commissioner Kamal Pant) ಫೆಬ್ರವರಿ 9 ರಿಂದ ಫೆಬ್ರವರಿ 22 ರವರೆಗೆ ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸಮೀಪದ 200 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಹೋರಾಟ, ಸಂಘಟನೆ ಮಾಡುವಂತಿಲ್ಲ, 5ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ, ಎಂದು ನಿಷೇದಾಜ್ಞೆಯನ್ನು ಹೊರಡಿಸಿದ್ದಾರೆ.

- Advertisement -

Latest Posts

Don't Miss