Tuesday, April 15, 2025

Latest Posts

ಫಯಾಜ್‌ಗೆ ಸಿಐಡಿಯಿಂದ ಫುಲ್ ಡ್ರಿಲ್: ವಿಚಾರಣೆ ನಡೆಸಲಿದ್ದಾರೆ ಸಿಐಡಿ ಡಿಐಜಿ ಸುಧೀರ್ ಕುಮಾರ್ ರೆಡ್ಡಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿರಂಜನ ಹಿರೇಮಠ ಪುತ್ರಿ ಕೊಲೆ ಪ್ರಕರಣಕಕ್ಕೆ ಸಂಬಂಧಿಸಿದಂತೆ, ಆರೋಪಿ ಫಯಾಜ್‌ನ ಸಿಐಡಿ ಅವಧಿ ನಾಳೆಗೆ ಮುಕ್ತಾಯವಾಗುತ್ತಿರುವ ಹಿನ್ನೆಲೆ, ಸಿಐಡಿ ಅಧಿಕಾರಿಗಳು ಸಾಕಷ್ಟು ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಫಯಾಜ್‌ನನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಿರುವ ಸಿಐಡಿ ಅಧಿಕಾರಿಗಳು, ಪ್ರಕರಣದ ತನಿಖೆಯ ಎಲ್ಲಾ ಆಯಾಮಗಳಲ್ಲೂ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ತನಿಖೆಯಲ್ಲಿ ಒಂದೊಂದು ಸ್ಪೋಟಕ ವಿಚಾರಗಳನ್ನು ಸಂಗತಿಗಳನ್ನು ಸಿಐಡಿ ಅಧಿಕಾರಿಗಳ ಮುಂದೆ ಆರೋಪಿ ಫಯಾಜ್ ಬಾಯಿಬಿಡುತ್ತಿದ್ದಾನೆ. ಫಯಾಜ್ ಹೇಳುತ್ತಿರುವ ಸ್ಪೋಟಕ ವಿಚಾರಗಳನ್ನು ಕೇಳಿ ಅಧಿಕಾರಿಗಳೇ ಶಾಕ್ ಆಗುತ್ತಿದ್ದಾರಂತೆ. ಆ ಮಟ್ಟಿಿಗೆ ಫಯಾಜ್‌ ಖತರ್ನಾಕ್ ಐಡಿಯಾಗಳನ್ನು ಮಾಡಿದ್ದನಂತೆ. ಹುಬ್ಬಳ್ಳಿಯ ಹೊರವಲಯದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಪ್ರಕರಣದ ತನಿಖೆ ನಡೆಸಲು ಸಿಐಡಿ ಡಿಐಜಿ ಸುಧೀರ್ ಕುಮಾರ್ ರೆಡ್ಡಿ ತನಿಖೆ ಪರಿಶೀಲನೆ ಮಾಡಲಿದ್ದಾರೆ. ಹುಬ್ಬಳ್ಳಿಗೆ ಬಂದು ಸದ್ಯ ನಡೆಯುತ್ತಿರುವ ವಿಚಾರಣೆಯಲ್ಲಿ ಸುಧೀಾರ್ ಕುಮಾರ್ ಅವರು ಕೂಡ ಭಾಗಿಯಾಗಲಿದ್ದಾರೆ. ಅಲ್ಲದೇ, ಫಯಾಜ್‌ನನ್ನು ವಿಚಾರಣೆಗೆ ಒಳಪಡಿಸಿ, ನೇಹಾ ಕೊಲೆ ಪ್ರಕರಣದ ತನಿಖೆಯ ಮಾಹಿತಿಯನ್ನು ಪಡೆಯಲಿದ್ದಾರೆ.

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

ಮತದಾನ ಜಾಗೃತಿ ಮೂಡಿಸಿ ಗಮನಸೆಳೆದ ಪುಟಾಣಿಗಳು

ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ

- Advertisement -

Latest Posts

Don't Miss