ಮೊದಲ ಭಾಗದಲ್ಲಿ ನಾವು ಚತ್ರಕ ಮತ್ತು ಆರ್ಯ ತಮ್ಮ ಗಲ್ಲು ಶಿಕ್ಷೆಯ ಅವಧಿಯನ್ನು 6 ತಿಂಗಳಿಗೆ ಮುಂದೂಡಿದ್ದರ ಬಗ್ಗೆ ಹೇಳಿದ್ದೆವು. ಎರಡನೇ ಭಾಗದಲ್ಲಿ ರಾಜನ ಕುದುರೆಗಳು ವಿದ್ಯೆ ಕಲಿಯುತ್ತದಾ..? ಆರ್ಯ, ಚತ್ರಕ ಸಾವಿನಿಂದ ತಪ್ಪಿಸಿಕೊಳ್ಳುತ್ತಾರಾ..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಚತ್ರಕ ಮತ್ತು ಆರ್ಯನನ್ನು ಸೈನಿಕರ ಕೋಟೆಗೆ ಬಿಡಲಾಗುತ್ತದೆ. ಆಗ ಆರ್ಯ, ಚತ್ರಕನನ್ನು ಕೇಳುತ್ತಾನೆ, ನಿನಗೆ ನಿಜವಾಗ್ಲೂ ಈ ವಿದ್ಯೆ ಗೊತ್ತುಂಟಾ ಎಂದು. ಆಗ ಚತ್ರಕ, ಖಂಡಿತ ನನಗೆ ಈ ವಿದ್ಯೆ ಗೊತ್ತಿಲ್ಲ. ಆದ್ರೆ ನಾವು ರಾಜನ ಮುಂದೆ ಪ್ರಾಣ ಭಿಕ್ಷೆ ಬೇಡಿದ್ರೆ, ಅವನು ನಮ್ಮನ್ನು ಬಿಡುತ್ತಿರಲಿಲ್ಲ. ಇನ್ನೂ ಖುಷಿ ಖುಷಿಯಾಗಿಯೇ ಗಲ್ಲಿಗೇರಿಸುತ್ತಿದ್ದ. ಆದ್ರೆ ಈಗ ಅವನಿಗೆ ಸಹಾಯ ಮಾಡುತ್ತೇನೆಂದು ಆಸೆ ತೋರಿಸಿ, ಸಾವನ್ನು ಕೆಲ ಸಮಯ ಮುಂದೂಡಿದ್ದೇನೆ. ಇದು ಚಾಣಕ್ಯರು ನನಗೆ ಹೇಳಿದ ಪಾಠ.
ಅವರು ಹೇಳಿದ ಉಪಾಯವನ್ನು ಇಲ್ಲಿ ಉಪಯೋಗಿಸಿದ್ದೇನೆ. ನಿನ್ನೆ ನಮಗೆ ಮರಣದಂಡನೆ ಶಿಕ್ಷೆ ಘೋಷಿಸಿದ ಬಳಿಕ, ಸೈನಿಕರು ಕುದುರೆಯ ಬಗ್ಗೆ ರಾಜನಿಗೆ ಇರುವ ಕಾಳಜಿ, ಪ್ರೀತಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದನ್ನು ಕೇಳಿಸಿಕೊಂಡೆ. ಆದ್ದರಿಂದ ನಿನ್ನೆಯೇ ಈ ಬಗ್ಗೆ ಯೋಚಿಸಿ, ಉಪಾಯ ಕಂಡುಕೊಂಡಿದ್ದೆ ಎನ್ನುತ್ತಾನೆ. ನಂತರ ರಾಜ, ಅವರಿಬ್ಬರಿಗೂ ದುಡ್ಡು ಮತ್ತು ತನ್ನ ಪ್ರಿಯವಾದ ಕುದಿರೆಯನ್ನು ಒಪ್ಪಿಸಿ ಹೋಗುತ್ತಾನೆ. ಅದರೊಂದಿಗೆ ಇನ್ನೊಂದು ಕುದುರೆ ತೆಗೆದುಕೊಂಡು, ಇಬ್ಬರೂ ಚಾಣಕ್ಯನ ಬಳಿ ಓಡಿ ಹೋಗುತ್ತಾರೆ. ಈ ಬುದ್ಧಿವಂತಿಕೆಯಿಂದ ಇಬ್ಬರ ಪ್ರಾಣವೂ ಉಳಿಯಿತು, ಕುದುರೆ ಮತ್ತು ಹಣವೂ ಸಿಕ್ಕಿತು.