ರಾಜಕಾರಣದಲ್ಲಿ ಟಗರು ನುಗ್ಗಿದ ಹಾಗೆ ನುಗ್ಗುತ್ತೇನೆ ಎಂದ ಜಿ.ಬಿ. ವಿನಯ್ ಕುಮಾರ್

Political News: ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ದಾವಣಗೆರೆಯಲ್ಲಿ ಮಾತನಾಡಿದ್ದು, ನಾನು ಟಗರು ನುಗ್ಗಿದ ಹಾಗೆ ನುಗ್ಗುತ್ತೇನೆ. ಯಾವ ಕ್ಷೇತ್ರವೆಂದು ಇನ್ನು ಆಯ್ಕೆ ಮಾಡಿಲ್ಲವಷ್ಟೇ. ಗುರು ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು ನಿರ್ಧಾರಕ್ಕೆ ಬರುತ್ತೇನೆ. ಆಧರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವೆಂದು ಹೇಳಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಅವರು, ಇನ್ನುವರೆಗೂ ಕ್ಷೇತ್ರ ಯಾವುದೆಂದು ತೀರ್ಮಾನಿಸಿಲ್ಲ. ಹೊನ್ನಾಳಿ, ಹರಿಹರ, ಹರಪ್ಪನಹಳ್ಳಿ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಈ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಇದೆ. ಶಾಸಕನಾದ ಮೇಲೆ ಶೈಕ್ಷಣಿಕ ಅಸಮಾನತೆ ಹೋಗಲಾಡಿಸುತ್ತೇನೆ. ನಾನು ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಜನಸೇವೆ ಮಾಡಬೇಕು, ಅಸಮಾನತೆ ತೊಲಗಿಸಬೇಕು ಎಂಬ ಗುರಿ ಹೊಂದಿದ್ದೇನೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.

ನಾನು ಶಾಸಕ, ಸಂಸದನಾದರೆ ಬೇರೆಯವರು ಹುಬ್ಬೇರಿಸುವ ರೀತಿ ಕೆಲಸ ಮಾಡಿ ತೋರಿಸುತ್ತೇನೆ. ಇದಕ್ಕೆ ಬೇಕಾದ ಛಲ, ಸಾಮರ್ಥ್ಯ, ಬುದ್ಧಿವಂತಿಕೆ ನನ್ನಲ್ಲಿದೆ. ಅವಕಾಶ ಸಿಗಬೇಕಷ್ಟೇ. ಲೋಕಸಭೆ ಚುನಾವಣೆಯಿಂದ ಪಾಠ ಕಲಿತಿದ್ದೇನೆ. ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೇನೆ. ನಾನು ರಾಜಕಾರಣದಲ್ಲಿ ಬೆಳೆಯಬೇಕಾದರೆ, ನಿಮ್ಮ ಆಶೀರ್ವಾದವೂ ಬೇಕು ಎಂದು ವಿನಯ್ ಕುಮಾರ್ ಹೇಳಿದ್ದಾರೆ.

About The Author