Sunday, September 8, 2024

Latest Posts

Gadag ; ಬರಪಿಡಿತ ಪ್ರದೇಶದಿಂದ ಕೈ ಬಿಟ್ಟ ಹಿನ್ನೆಲೆ ಮುಂಡರಗಿಯಲ್ಲಿ ಪ್ರತಿಭಟನೆ..!

- Advertisement -

ಗದಗ: ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಬೆಳೆದ ಬೆಳೆ ಹಾಳಾಗಿ ಹೋಗಿರುವುದರಿಂದ ಸರ್ಕಾರ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಕೆಲವು ತಾಲೂಕುಗಳನ್ನುಬರ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಿಲ್ಲ, ಅದರಲ್ಲಿ ಗದಗ ಜಿಲ್ಲೆಯ ಮುಂಡರಗಿಯನ್ನು ಕೈಬಿಟ್ಟಿದ್ದಕ್ಕಾಗಿ ರೈತರು ಬಂದ್ ಕರೆ ಕೊಟ್ಟಿದ್ದಾರೆ.

ಮುಂಡರಗಿ ತಾಲೂಕನ್ನು ಬರ ಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸದ ಹಿನ್ನೆಲೆ ರೈತರು ಮುಂಡರಗಿ ನಗರವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಕೈಗೊಂಡಿದ್ದಾರೆ. ಕೋಟೆ ಭಾಗದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ತಹಶಿಲ್ದಾರ್ ಕಛೇರಿಯವರೆಗೆ ಪ್ರತಿಭಟನಾ ಯ್ರಾಲಿಯನ್ನು ನಡೆಸುತ್ತಿದ್ದಾರೆ.

ಈ ಬಂದ್ ಗೆ ಸಾಕಷ್ಟು ಸಂಘಟನೆಗಳು ಕನ್ನಡ ಪರ ಸಂಘಟನೆಗಳು,ಕಾರ್ಮಿಕರು  ಬೆಂಬಲ ಸೂಚಿಸಿದ್ದಾರೆ. ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್​ ಮಾಡಲಾಗಿದೆ. ಮುಂಡರಗಿ ಸಂಪೂರ್ಣ ಬಂದ್ ಆಗಿರುವ ಕಾರಣ ಜನರ ಓಡಾಟ ವಿರಳವಾಗಿದೆ ಇದರಿಂದಾಗಿ ಪರಯಾಣಿಕರಿಲ್ಲದೆ ಬಸ್ ಗಳು ಬಣಗುಡುತ್ತಿವೆ.

ಇನ್ನು ಈ ಪ್ರತಿಭಟನೆಗೆ ನಾಡೋಜ ಅನ್ನದಾನೇಶ್ವರಿ ಶ್ರೀಗಳು ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎನ್ನುವ ದೃಷ್ಟಿಯಿಂದ ಪೊಲೀಸ್  ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

’75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು’

ಲೋಕಸಭೆ ಚುನಾವಣೆ ಹಿನ್ನೆಲೆ ಡಿಕೆಶಿ ಮನೆಗೆ ಸವದಿ ಭೇಟಿ: ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ

ಇದು ಅವರ ಮಾನಸಿಕತೆ ತೋರಿಸುತ್ತದೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿರುದ್ಧ ಸಚಿವ ಪ್ರಲ್ಹಾದ್​ ಜೋಶಿ ಕಿಡಿ

- Advertisement -

Latest Posts

Don't Miss