Gadag News: ಗದಗ: ಗದಗನಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿದ್ದು, ನಾಳೆಯಿಂದ ನಡೆಯುವ ಜಾತಿಗಣತಿಯಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಿ ಎಂದಿದ್ದಾರೆ.
ರಾಜ್ಯದ 16 ಜಿಲ್ಲೆಗಳಿಗೆ ಭೇಟಿ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಿ. ಪಂಚಮಸಾಲಿಗಳ ಮನೆ ಮನೆಗೆ ತೆರಳಿ ಸ್ಟಿಕರ್ ಹಚ್ಚುವ ಮೂಲಕ ಜಾಗೃತಿ ಮಾಡಲಾಗ್ತಿದೆ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಏಕತಾ ಸಮಾವೇಶಕ್ಕೂ ನಮ್ಮ ಪಂಚಮಸಾಲಿ ಸಂಘಕ್ಕೂ ಯಾವುದೆ ಸಂಬಂಧ ಇಲ್ಲ. ಅದು ಬೇಡಜಂಗಮರ ಸಮಾವೇಶ, ಅಲ್ಲಿ 7 ಸಾವಿರ ಜನ ಸೇರಿದ್ರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಚಾರ ಮಾಡಿದ್ರೂ ಅಲ್ಲಿ ಸೇರಿದ್ದು ಕೇವಲ 7 ಜನ. ವೇದಿಕೆ ಮೇಲೆ ಸ್ವಾಮೀಜಿಗಳು ಇದ್ರು, ಉಳಿದವರು ಪೂಜೆ ಮಾಡುವ ಪುರೋಹಿರು ಇದ್ರು. ಆ ಸಮಾವೇಶದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟಿದ್ದಾರೆ. ಆ ಸಮಾವೇಶದಲ್ಲಿ ಜನ್ರಿಗೆ ಏನು ಸಂದೇಶವನ್ನು ಕೊಟ್ರು ಅನ್ನೋದೇ ಗೊತ್ತಾಗಿಲ್ಲ. ಕಂಪ್ಲೀಟ್ ಪ್ಲಾಫ್ ಆಗಿದೆ ಅದು ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶಕ್ಕೆ ಜನಗಳ ಸ್ಪಂದನೆ ಸಿಕ್ಕಿಲ್ಲ. ಹುಬ್ಬಳ್ಳಿಯ ಸಮಾವೇಶಕ್ಕೆ ಹೋಗಬೇಡಿ ಎಂದು ನಾನು ಹಾಗೂ ಕೂಡಲಸಂಗಮ ಸ್ವಾಮೀಜಿ ಹೇಳಿದ್ವಿ. ಭಕ್ತರು ಅದನ್ನು ಪಾಲಿಸಿದ್ದಾರೆ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.




