Political news: ಗಾಲಿ ಜನಾರ್ಧನ ರೆಡ್ಡಿ ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಬಿಜೆಪಿ ಧ್ವಜ ನೀಡುವ ಮೂಲಕ ಬಿ.ವೈ.ವಿಜಯೇಂದ್ರ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಇದೇ ಸಂದರ್ಭದಲ್ಲಿ ಥಾಮಸ್ ಜಾನ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಮೂಲಕ ಕಲ್ಯಾಣ ಪ್ರಗತಿ ಪಕ್ಷ ಬಿಜೆಪಿ ಜೊತೆ ವಿಲೀನವಾಗಿದೆ. ಕಾರ್ಯಕ್ರಮದಲ್ಲಿ ಬಿಎಸ್ ವೈ, ಶ್ರೀರಾಮುಲು, ಸಿಟಿ ರವಿ, ಪಿಸಿ ಮೋಹನ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇನ್ನು ಇದೇ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಇಂದು ಜನಾರ್ಧನ್ ರೆಡ್ಡಿ, ಥಾವಸ್ ಜಾನ್ ಪಕ್ಷ ಸೇರಿದ್ದಾರೆ. ತಾವೇ ಕಟ್ಟಿದ ಪಕ್ಷ ವಿಲೀನಗೊಳಿಸಿದ್ದಾರೆ. ಮೋದಿ ಪ್ರಧಾನಿಯಾಗಲು ಕರ್ನಾಟಕ ದೊಡ್ಡ ಕೊಡುಗೆ ಕೊಡಬೇಕು ಎಂದಿದ್ದಾರೆ. ಮೋದಿ ಪರ ವಾತಾವರಣ ನಿರ್ಮಾಣವಾಗಿದೆ. ದೇಶದ ಭವಿಷ್ಯದ ರೂಪಿಸುವ ಚುನಾವಣೆ. ನಾವು, ಜೆಡಿಎಸ್ ಸೇರಿ ಗೆಲ್ಲುತ್ತೇವೆ. ಕರ್ನಾಟಕ ದೊಡ್ಡ ಕೊಡುಗೆ ನೀಡಲಿದೆ ಎಂದಿದ್ದಾರೆ.
ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯವರನ್ನು ಜನರು ಯಾಕೆ ನಂಬುತ್ತಾರೆ?: ಸಿಎಂ
ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುವೆ: ಜಗದೀಶ್ ಶೆಟ್ಟರ್
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆ