ಬೆಂಗಳೂರು : ಇವರು ಚಾಲಾಕಿ ಚತುರರು. ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗೋಧಿ ಹಿಟ್ಟಿನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಗ್ಯಾಂಗ್ ಖಾಕಿ ಖೆಡ್ಡಾಕ್ಕೆ ಬಿದ್ದಿದೆ. ಮಯನ್ಮಾರ್ ಗಡಿ ಭಾಗದಿಂದ ರೈಲಿನಲ್ಲಿ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡುತಿದ್ದರು. ಗೋಧಿ ಹಿಟ್ಟಿನ ಬಾಕ್ಸ್ ನಲ್ಲಿ ಡ್ರಗ್ಸ್ ತಂದು ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು.
ಒಂದು ಗ್ರಾಂ ಹೆರಾಯಿನ್ ನನ್ನು 12 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಣಿಪುರ ಮೂಲದ ಸಮೀರ್ ಮತ್ತು ಖಾನ್ ಎಂಬುವರನ್ನು ಬಂಧಿಸಲಾಗಿದೆ. ಕೆಜಿ ಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರೈಲಿನಲ್ಲಿ ಮಣಿಪುರದಿಂದ ನಗರಕ್ಕೆ ಬಂದು ಹೆರಾಯಿನ್ ಮಾರಾಟ ಮಾಡಿ ಊರಿಗೆ ಹೋಗುತ್ತಿದ್ದರು. ವಾರಕ್ಕೊಮ್ಮೆ ಬರುವುದು ಇವರ ವಾಡಿಕೆಯಾಗಿತ್ತು.
ಪ್ರತಿ ಬಾರಿಯೂ ಸ್ಥಳ ಬದಲಿಸಿ ಸಬ್ ಫೆಡ್ಲರ್ಸ್ ಹಾಗೂ ಹಳೇ ಕನ್ಸುಮರ್ಸ್ ಗೆ ಮಾರಾಟ ಮಾಡುತ್ತಿದ್ದರು. ಈ ಬಾರಿ ನಗರಕ್ಕೆ ಬಂದಿದ್ದಾಗ ಕೆಜಿ ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೆರಾಯಿನ್ ಮಾರಾಟ ಮಾಡಿ ಊರಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಕಿರಾತಕರ ಬಂಧನವಾಗಿದೆ. ಇವರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವ ಅನುಮಾನ ಇದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.