Sunday, July 6, 2025

Latest Posts

Hubballi ; ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ಪ್ರಕರಣ: ಮತ್ತಿಬ್ಬರನ್ನು ಬಂಧಿಸಿದ ಖಾಕಿ!!

- Advertisement -

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಅಪರಾಧ ಕೃತ್ಯಗಳ ಕಡಿವಾಣಕ್ಕೆ ಪಣತೊಟ್ಟಿರುವ ಖಾಕಿ, ಈಗಾಗಲೇ ಅಪರಾಧ ಕೃತ್ಯ ಎಸಗುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ಯಾಂಗ್ ವಾರ ನಡೆದಾಗ ಓರ್ವ ರೌಢಿಶೀಟರನನ್ನು ಕಾಲಿಗೆ ಗುಂಡು ಹಾಕಿ ಪೊಲೀಸರು ಬಂಧಿಸಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತಿಬ್ಬರನ್ನು ಕಸಬಾ ಠಾಣೆಯ ಪೊಲೀಸರು ಕಳೆದ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

 

ಹೌದು, ಖಚಿತ ಮಾಹಿತಿ ಮೇರೆಗೆ ನಟೋರಿಯಸ್ ರೌಢಿಗಳಾದ ಬಾರಾ ರಫೀಕ್ ಹಾಗೂ ಜಾಡ ಸಾಧೀಕ್ ಎಂಬಾತರನ್ನು ಗಬ್ಬೂರ ಸರ್ಕಲ್ ಬಳಿಯಲ್ಳಿ ಕಸಬಾಪೇಟೆ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ನೇತೃತ್ವದಲ್ಲಿ ಹವಾಲ್ದಾರ್ ಎಲ್. ವಾಯ್. ಪಾಟೀಲ, ಹಣಮಂತ ಬ್ಯಾಡಗಿ ಸೇರಿದಂತೆ ಮತ್ತೆ ಕೆಲವು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬಂಧಿಸುವ ಕಾಲದಲ್ಲಿ ಪೊಲೀಸರ ಮೇಲೆಯೇ ಜೀವ ಬೆದರಿಕೆಯನ್ನು ಹಾಕಿದ ಅಪರಾಧಿಗಳು, ಪೊಲೀಸರ ಮೇಲೆ ಕಲ್ಲು ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿ ಆಗಲು ಯತ್ನಿಸಿದ್ದಾರೆ. ಕಡೆಗೂ ಪೊಲೀಸರು ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸಿದ್ದಾರೆ .ಇನ್ನು ಈ ಕಾರ್ಯಾಚರಣೆಯಲ್ಲಿಪೊಲೀಸರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲಿಸಿದ್ದಾರೆ.

ಕಸಬಾ ಠಾಣೆಯ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇತ್ತ ಖಾಕಿ ಕಾರ್ಯಕ್ಕೆ ನಟೋರಿಯಸ್ ರೌಢಿಗಳು ಅಷ್ಟೇ ಅಲ್ಲದೇ ಅಕ್ರಮ ಕುಳಗಳು ಹೆದರಿ ಊರು ಬಿಡುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -

Latest Posts

Don't Miss