Bengaluru:ಭಾರತ ಬಿಟ್ಟು ತೊಲಗಿ ಚಳುವಳಿ ದಿನ ಅಂಗವಾಗಿ ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ನಗರದ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲಮಂದಿರ ಮಕ್ಕಳಿಂದ ಗೀತ ವಾಚನ, ಶ್ರೀಮತಿ ದೀಪಿಕಾ ಶ್ರೀಕಾಂತ್ ರವರಿಂದ ವೈಷ್ಣವ ಜನತೋ, ಹಡ್ಸನ್ ಚರ್ಚಿನ ಫಾದರ್ ಶ್ರೀ ರೆವೆರೆಂಡ್ ಆಲ್ಫ್ರೆಡ್ ಸುದರ್ಶನ್ ಮತ್ತು ತಂಡದಿಂದ ಬೈಬಲ್ ವಾಚನ, ಗುರುದ್ವಾರದ ಶ್ರೀ ಗುರುಸಿಂಗ್ ಸಭಾ ಮತ್ತು ತಂಡದವರಿಂದ ಗುರು ಗ್ರಂಥ ವಾಚನ, ಮೌಲ್ವಿ ಹಫೀಜ್ ಶಾಬೀರ್ ಹುಸೇನ್ ರವರಿಂದ ಖುರಾನಿನ ವಾಚನ ಮಾಡಲಾಯಿತು.
ಈ ವೇಳೆ ವಿಶೇಷ ಆಯುಕ್ತರು(ಆಡಳಿತ) ಶ್ರೀ ಹರೀಶ್ ಕುಮಾರ್, ಉಪ ಆಯುಕ್ತರಾದ ಶ್ರೀ ಮಂಜುನಾಥ್ ಸ್ವಾಮಿ, ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಮಾಜಿ ಸಚಿವರಾದ ಶ್ರೀ ರಾಮಚಂದ್ರೇಗೌಡ್ರು, ಮಾಜಿ ಮಹಾಪೌರರಾದ ಶ್ರೀ ಜೆ. ಹುಚ್ಚಪ್ಪ, ಶ್ರೀ ಎಂ.ರಾಮಚಂದ್ರಪ್ಪ, ಶ್ರೀ ಎಸ್.ಕೆ.ನಟರಾಜ್, ಶ್ರೀ ಡಿ.ವೆಂಕಟೇಶ್ ಮೂರ್ತಿ, ಶ್ರೀ ಬಿ.ಎಸ್.ಸತ್ಯನಾರಾಯಣ, ಹಾಗೂ ಇನ್ನಿತರೆ ಗಣ್ಯರುಗಳು ಉಪಸ್ಥಿತರಿದ್ದರು.
AAP: ಭ್ರಷ್ಟ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ತಕ್ಷಣ ವಜಾಗೊಳಿಸಿ: ಎಎಪಿ ಆಗ್ರಹ
DKS: ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸುರೇಶ್ ಕುಮಾರ್ ಯಾಕೆ ಪತ್ರ ಬರೆಯಲಿಲ್ಲ ?
DK Shivakumar: ಕುಮಾರಕೃಪಾ ಅತಿಥಿಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:



