International News: ವಿಶ್ವದ ನಂಬರ್ 1 ಶ್ರೀಮಂತ್ ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿದೆ.
ಟ್ವೀಟರ್‌ನಲ್ಲಿ ಬರುತ್ತಿದ್ದ ದ್ವೇಷದ ಪೋಸ್ಟ್‌ಗಳು, ನಿಂದನೆಗಳ ಟ್ವೀಟ್‌ಗಳನ್ನು ಗಮನಿಸುತ್ತಿದ್ದ ಸುರಕ್ಷತಾ ವಿಭಾಗದಿಂದ 1 ಸಾವಿರ ಜನರಿಗೆ ಗೇಟ್ ಪಾಸ್ ನೀಡಲಾಗಿದೆ. ಏಕೆಂದರೆ, ಇವರೆಲ್ಲ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದರೆಂಬ ಕಾರಣ ಕೊಟ್ಟಿರುವ ಸಂಸ್ಥೆ, ಇಷ್ಟು ಜನರನ್ನು ಕೆಲಸದಿಂದ ಕಿತ್ತು ಹಾಕಿದೆ.
ಆದರೆ ಹೀಗೆ ಸುರಕ್ಷತಾ ತಂಡದವರನ್ನು ತೆಗೆದು ಹಾಕಿದ ಪರಿಣಾಮ, ಟ್ವಿಟರ್‌ನಲ್ಲಿ ಇನ್ನೂ ಹೆಚ್ಚು ದ್ವೇಷಪೂರಿತ ಟ್ವೀಟ್‌ಗಳು ಹರಿದಾಡುವುದು ಹೆಚ್ಚಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ, ಮಕ್ಕಳ ಅಶ್ಲೀಲ ಫೋಟೋಗಳನ್ನು ಎಕ್ಸ್‌ನಿಂದ ತೆಗೆಯಲು, ಈ ಸೇಫ್ಟಿ ಕಮಿಷನ್ ಸಮಯ ಕೂಡ ನೀಡಿತ್ತು. ಆದರೆ ಆ ಫೋಟೋಗಳನ್ನು ತೆಗೆಯದ ಕಾರಣ, ಎಕ್ಸ್ ಸಂಸ್ಥೆಗೆ 3,88,000 ಸಾವಿರ ಡಾಲರ್ ದಂಡ ವಿಧಿಸಿತ್ತು. ಆದರೆ ಇನ್ನೂ ಕೂಡ ಎಕ್ಸ್ ಸಂಸ್ಥೆ ಈ ದಂಡ ಕಟ್ಟಲಿಲ್ಲ. ಅಲ್ಲದೇ, ದಂಡ ರದ್ದುಪಡಿಸಲು ಕೋರ್ಟ್ ಮೊರೆ ಹೋಗಿದೆ.
ರೇಪ್ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..
ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..