Banglore News:
ಸೂರ್ಯ ರಶ್ಮಿಯು ನಂದಿಯ ಕೊಂಬುಗಳ ಮೂಲಕ ಹಾದು ಗರ್ಭಗುಡಿ ತಲುಪೋ ಆ ಸುಂದರ ಕ್ಷಣಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾಗುವುದು ಬೆಂಗಳೂರಿನ ಗವಿ ಗಂಗಾದರೇಶ್ವರ ದೇವಾಲಯದಲ್ಲಿ.ಮಕರ ಸಂಕ್ರಾಂತಿಯ ಪುಣ್ಯ ದಿನದಂದು ಸಂಜೆಯ ಸಮಯದಲ್ಲಿ ಈ ಭವ್ಯ ಸಂಗತಿ ನಡೆಯುತ್ತದೆ.ದಕ್ಣದಿಂದ ಉತ್ತರ ಫಥಕ್ಕೆ ಭಾಸ್ಕರನು ಪಥ ಸಂಚಲನ ಮಾಡುವಂತಹ ಸಮಯದಲ್ಲಿ ಈ ಸುಂದರ ದೃರ್ಶಯವು ಭಕ್ತರನ್ನು ಪಾವನವಾಗಿಸುತ್ತದೆ.16ನೇ ಶತಮಾನದಲ್ಲಿ ಒಂದನೇ ಕೆಂಪೇಗೌಡ ನಿರ್ಮಿಸಿದ ದೇವಾಲಯ ಇದಾಗಿದ್ದು ತನ್ನ ಐತಿಹ್ಯದ ಮೆರಗನ್ನು ಇಂದಿಗೂ ಆದಿತ್ಯನ ಆ ಕಿರಣಗಳಷ್ಟೇ ಪ್ರಕಾಶಮಾನವಾಗಿ ಉಳಿಸಿಕೊಂಡು ಬಂದಿದೆ.




