Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, ಮಿಥುನ ರಾಶಿಯವರಿಗೆ 2025ನೇ ವರ್ಷ ಹೇಗಿರಲಿದೆ ಎಂದು ಭವಿಷ್ಯ ಹೇಳಿದ್ದಾರೆ.
ಮಿಥುನ ರಾಶಿಯವರಿಗೆ ಈ ವರ್ಷ ಅಷ್ಟ ಲಾಭದಾಯಕವೂ ಇಲ್ಲ. ಅಷ್ಟು ನಷ್ಟವೂ ಇಲ್ಲ. ಮಧ್ಯಮವಾಗಿರಲಿದೆ. ಜನ್ಮರಾಶಿಯಲ್ಲಿ ಗುರು ಬಂದು, ಬುಧನ ಮನೆಗೆ ಬರುತ್ತಾನೆ. ಗುರು ಮತ್ತು ಬುಧನ ಮಧ್ಯೆ ತಂದೆ ಮಕ್ಕಳ ಸಂಬಂಧವಿದ್ದು, ಇದು ಮಗನ ಮನೆಗೆ, ತಂದೆ ಬರುವ ಹಾಗೆ. ಮತ್ತು ಶನಿ ದಶಮ ಸ್ಥಾನಕ್ಕೆ ಬಂದಿದ್ದು, ತಟಸ್ಥವಾಾಗಿದ್ದಾನೆ. ಹಾಗಾಗಿ ಈ ವರ್ಷ ದೊಡ್ಡ ಯೋಗವೂ ಇಲ್ಲ, ದೊಡ್ಡ ಕಷ್ಟವೂ ಇಲ್ಲ.
ಹಾಗಾದ್ರೆ ಮಿಥುನ ರಾಶಿಯವರಿಗೆ ಈ ವರ್ಷದ ಉತ್ತಮ ಫಲವೇನು ಅಂದ್ರೆ, ಪುತ್ರ ಒಳ್ಳೆಯ ಹೆಸರನ್ನು ತಂದು ಕೊಡುತ್ತಾನೆ. ಅಥವಾ ಮಿಥುನ ರಾಶಿಯವರು ಅಪ್ಪನಿಂದ ಲಾಭ ಪಡೆಯುತ್ತಾರೆ. ಆದರೆ ನಿಮಗಾಗುವಂಥ ಸಮಸ್ಯೆ ಅಂದ್ರೆ, ಆರೋಗ್ಯದಲ್ಲಿ ಸಮಸ್ಯೆಯಾಗುತ್ತದೆ.
ಮೂರನೇ ಮನೆಯಲ್ಲಿ ಕೇತು ಇರುವುದರಿಂದ ಶತ್ರುಬಾಧೆ ತಂದುಕೊಡುತ್ತಾನೆ. ಶತ್ರುಗಳೆಂದರೆ, ಹೊರಗಿನವರಲ್ಲ, ಬದಲಾಗಿ. ಬಂಧು ಬಾಂಧವರೇ. ಹಿತಶತ್ರುಗಳಿಂದಲೇ ನಿಮಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ಉದ್ಯಮದಲ್ಲಿ ನಷ್ಟವೂ ಇರುವುದಿಲ್ಲ, ಹೆಚ್ಚು ಲಾಭವೂ ಇರುವುದಿಲ್ಲ. ಹಾಗಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324