Hubballi News: ಹುಬ್ಬಳ್ಳಿ: ಸಿದ್ಧರಾಮಣ್ಣ ಇನ್ನೂ ಎರಡು ಭಾಗ್ಯ ಕೊಡಿ ಒಂದು ಪುರುಷರಿಗೆ ಫ್ರೀ ಭಾಗ್ಯ. ಇನ್ನೊಂದು ಆಟೋ ಚಾಲಕರಿಗೆಲ್ಲಾ ವಿಷದ ಬಾಟಲಿ ಕೊಡಿಸುವ ಭಾಗ್ಯ ಎಂಬುವಂತ ಹೃದಯವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ಮಹಿಳೆಯರಿಗೆ ಫ್ರೀ ಸಂಚಾರ ಸಂಕಷ್ಟದಲ್ಲಿ ಆಟೋ ಚಾಲಕರು ಹುಬ್ಬಳ್ಳಿ ಆಟೋ ಚಾಲಕ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ವಿಡಿಯೋ ಫುಲ್ ವೈರಲ್ ಆಗಿದ್ದು, ಸಿದ್ಧರಾಮಣ್ಣ ನೀವ ಬಂದ ತಕ್ಷಣ ನಮಗೆ ಯಾಕೆ ಈ ಶಿಕ್ಷೆ ಇನ್ನು ಎರಡು ಭಾಗ್ಯ ಕೊಡಿ. ಒಂದು ಪುರುಷರಿಗೆ ಫ್ರೀ ಭಾಗ್ಯ, ಇನ್ನೊಂದು ನಮಗೆಲ್ಲ ವಿಷದ ಬಾಟಲಿ ಕೊಡಸಿ ಅಂತ ಹುಬ್ಬಳ್ಳಿಯ ಓರ್ವ ಆಟೋ ಡ್ರೈವರ್ ಸಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಹಿಳೆಯರಿಗೆ ಫ್ರೀ ಬಸ್ ಸಂಚಾರ ಹಿನ್ನೆಲೆ ಆಟೋ ಚಾಲಕರು ಸಂಕಷ್ಟ ಗುರಿಯಾಗಿದ್ದು, ಇದರಿಂದಾಗಿ ಆಕ್ರೋಶಗೊಂಡ ಹುಬ್ಬಳ್ಳಿ ಆಟೋ ಚಾಲಕ ಮೃತ್ಯುಂಜಯ ವಿಡಿಯೋ ಮೂಲಕ ಸಿದ್ದು ಸರ್ಕಾರದ ವಿರುದ್ಧ ತನ್ನ ಅಳಲು ಹೊರಹಾಕಿದ್ದಾನೆ. ಸಿಎಂ ಅವರೇ ನಮಗೆ ವಿಷಯ ಬಾಟಲಿ ಕೊಟ್ಟು, ನಿಮ್ಮ ಸರ್ಕಾರದಿಂದ ನಮಗೆ ಮರಣ ಭಾಗ್ಯ ಒದಗಿಸಿ. ನಿಮಗೆ ಮಹಿಳೆಯರು ಮಾತ್ರ ವೋಟ್ ಹಾಕಿಲ್ಲ,ಪುರುಷರು ವೋಟ್ ಹಾಕಿದ್ದಾರೆ.ನಮ್ಮ ಕಣ್ಣೀರು ಕಪಾಳಕ್ಕೆ ಬಂದಿದೆ ಎಂದು ಕಣ್ಣೀರ ಕಹಾನಿ ಬಿಚ್ಚಿಟ್ಟಿದ್ದಾರೆ.
ನಿಮ್ಮ ತರಹ ಕೋಟಿ ರೂಪಾಯಿ ವಾಚ್ ಕಟ್ಟಲ್ಲ.10 ಕೆಜಿ ಅಕ್ಕಿ ಕೊಡ್ತೀನಿ ಎಂದು ಸಿದ್ದರಾಮಯ್ಯ ರೀತಿಯಲ್ಲಿಯೇ ಟಾಂಗ್ ನೀಡಿದ ಆಟೋ ಚಾಲಕ. ನಮಗೆ ಇರೋದೆ 10 ಕಿಲೋ ಮೀಟರ್ ಅದರಲ್ಲೂ ನೀವ ಫ್ರೀ ಕೊಟ್ಟೀದಿರಿ ಹೀಗಾಗಿ ನಮಗೆ ಬದಕೋಕೆ ಆಗ್ತಿಲ್ಲ. ನಗರದಲ್ಲಿ ಕೊಲೆ ಸುಲಿಗೆ ಹೆಚ್ಚಾಗುತ್ತದೆ. ಇದಕ್ಕೆಲ್ಲ ಕಾರಣ ನೀವೆ ನಿಮ್ಮ ರಾಜಕೀಯಕ್ಕಾಗಿ ನಮ್ಮನ್ನು ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!
ನಿರ್ವಾಹಕಿಯನ್ನ ಅಸಹ್ಯವಾಗಿ ನಿಂದಿಸಿದ ವೃದ್ಧೆ: ಬಸ್‌ನಲ್ಲಿಯೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ




