Saturday, February 8, 2025

Latest Posts

ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1

- Advertisement -

ಕೆಲವರಿಗೆ ಕೆಲವು ಚಟಗಳಿರುತ್ತದೆ. ಅಂಥ ಚಟಗಳಲ್ಲಿ ಕೆಟ್ಟ ಚಟ ಅಂದ್ರೆ ಅನುಮಾನಿಸುವುದು. ಪತಿ ಮನೆಗೆ ಲೇಟಾಗಿ ಬಂದ್ರೂ ಅನುಮಾನ. ಗೆಳೆಯರೊಂದಿಗೆ ಇದ್ದೇನೆ ಅಂದ್ರೂ ಅನುಮಾನ. ಮಗ ಅಥವಾ ಮಗಳು ಎಕ್ಸ್ಟ್ರಾ ಕ್ಲಾಸ್ ಇದೆ ಅಂದ್ರೂ ಅನುಮಾನ. ಒಟ್ಟಿನಲ್ಲಿ ತಾನೊಬ್ಬನೇ ಸಾಚಾ, ಉಳಿದವರೆಲ್ಲರೂ ಏನೋ ನಡೆಸಿದ್ದಾರೆ ಅನ್ನೋ ಯೋಚನೆ ಹಲವರ ತಲೆಯಲ್ಲಿರುತ್ತದೆ. ಅಂಥವರಿಗಾಗಿಯೇ ನಾವೊಂದು ಕಥೆಯನ್ನ ತಂದಿದ್ದೇವೆ. ಏನಿದೆ ಆ ಕಥೆಯಲ್ಲಿ ಅಂತಾ ತಿಳಿಯೋಣ ಬನ್ನಿ..

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 2

ಒಂದು ಊರಿನಲ್ಲಿ ಓರ್ವ ಶ್ರೀಮಂತ ವ್ಯಕ್ತಿಯಿದ್ದ. ಆದರೆ ಅವನು ಜಿಪುಣನಾಗಿದ್ದ. ದಾನ ಧರ್ಮ ಪೂಜೆ ಪುನಸ್ಕಾರದಿಂದ ದೂರವಿದ್ದ. ಆದ್ರೆ ಅವನ ಪಕ್ಕದ ಮನೆಯ ವ್ಯಕ್ತಿ ಬಡವನಾಗಿದ್ದ. ಆದ್ರೆ ಕೊಟ್ಟು ತಿನ್ನುವ ಬುದ್ಧಿಯವನಾಗಿದ್ದ. ಒಮ್ಮೆ ಆ ಊರಿಗೆ ಬುದ್ಧನ ಆಗಮನವಾಯ್ತು. ಬಡವ ಬುದ್ಧ ಮತ್ತು ಅವನ ಶಿಷ್ಯರನ್ನು ತನ್ನ ಮನೆಗೆ ಊಟಕ್ಕೆ ಕರೆದ. ಅದೇ ವೇಳೆ ಎಷ್ಟಾಗತ್ತೋ, ಅಷ್ಟು ಹೆಚ್ಚು ಜನರನ್ನು ತನ್ನ ಮನೆಗೆ ಊಟಕ್ಕೆ ಕರೆದು, ಊಟ ಹಾಕಿ ಪುಣ್ಯ ಕಟ್ಟಿಕೊಳ್ಳೋಣವೆಂದು ಅವನಿಗೆ ಅನ್ನಿಸಿತು.

ಅವನು ತಕ್ಷಣ ಎಲ್ಲರ ಮನೆಗೆ ಹೋದ. ಅವರ ಬಳಿ ಕೊಂಚ ದಾನ ಕೇಳಿ, ಅವರನ್ನೆಲ್ಲ ತನ್ನ ಮನೆಗೆ ಊಟಕ್ಕೆ ಕರೆದ. ಇದನ್ನೆಲ್ಲ ಜಿಪುಣ ಶ್ರೀಮಂತ ಗಮನಿಸುತ್ತಿದ್ದ. ಈ ಬಡವ ತನ್ನ ಹೊಟ್ಟೆಯನ್ನೇ ತಾನು ತುಂಬಿಸಿಕೊಳ್ಳಾಗುತ್ತಿಲ್ಲ. ಅಂಥದರಲ್ಲಿ ಬುದ್ಧ ಮತ್ತು ಅವನ ಶಿಷ್ಯರಿಗೆ ಊಟ ಹಾಕುತ್ತೇನೆಂದು ಹೊರಟಿದ್ದಾನೆ. ಇದಕ್ಕಾಗಿ ಭಿಕ್ಷೆಯನ್ನೂ ಬೇಡುತ್ತಿದ್ದಾನೆ. ಇವನು ತನ್ನ ಮನೆಗೂ ಬರಬಹುದು ಎಂದು ಯೋಚಿಸುತ್ತಿದ್ದ.

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1

ಆಗ ತನ್ನ ಪಕ್ಕದ ಮನೆಯ ಜಿಪುಣ ಶ್ರೀಮಂತನ ಬಳಿಯೂ ಬಡವ ದಾನ ಕೇಳಿದ. ಶ್ರೀಮಂತ, ಕೊಂಚ ತುಪ್ಪ, ಉಪ್ಪು ಮತ್ತು ಜೇನುತುಪ್ಪವನ್ನು ನೀಡಿದ. ಬಡವ ಈ ಜಿಪುಣ ಶ್ರೀಮಂತ ಕೊಟ್ಟ ದಾನವನ್ನು ಸಪರೇಟ್ ಆಗಿ ಇಟ್ಟುಕೊಂಡ. ಇದನ್ನು ಕಂಡು ಆಶ್ಚರ್ಯಗೊಂಡ ಶ್ರೀಮಂತ, ಖಂಡಿತವಾಗ್ಲೂ ಈ ಬಡವ ನನ್ನನ್ನು ಅವಮಾನಿಸುವುದಕ್ಕಾಗಿಯೇ, ಹೀಗೆ ತನ್ನ ದಾನವನ್ನು ಸಪರೇಟ್ ಆಗಿ ಎತ್ತಿಟ್ಟುಕೊಂಡಿದ್ದಾನೆಂದು ಯೋಚಿಸುತ್ತಾನೆ. ತನ್ನ ನೌಕರನನ್ನು ಕರೆದು, ಬಡವ ತನ್ನ ದಾನವನ್ನು ಏನು ಮಾಡುತ್ತಾನೆಂದು ನೋಡು ಎಂದು ಕಳುಹಿಸುತ್ತಾನೆ. ಹಾಗಾದ್ರೆ ಬಡವ ಜಿಪುಣ ಶ್ರೀಮಂತನ ದಾನವನ್ನು ಯಾಕೆ ಎತ್ತಿಟ್ಟ..? ಅದರಿಂದ ಅವನೇನು ಮಾಡುತ್ತಾನೆಂದು ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss