ಗೋವಾ: ಮಾರಕ ಎಚ್ ಐವಿಗೆ ಕಡಿವಾಣ ಹಾಕುವ ಸಲುವಾಗಿ ಗೋವಾ ಸರ್ಕಾರ ನಿರ್ಧರಿಸಿದ್ದು, ವಿವಾಹ ಪೂರ್ವ ಎಚ್ಐವಿ ಪರೀಕ್ಷೆ ಖಡ್ಡಾಯಗೊಳಿಸುವುದಕ್ಕೆ ಚಿಂತನೆ ನಡೆಸಿದೆ.
ವಿಧಾನಸಭಾ ಮುಂಗಾರು ಅಧಿವೇಶನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಿವಾಹ ನೋಂದಣಿಗಾಗಿ ವಿವಾಹ ಪೂರ್ವ ಎಚ್ಐವಿ ಪರೀಕ್ಷೆ ಖಡ್ಡಾಯಗೊಳಿಸುವುದಕ್ಕೆ ನಿರ್ಧರಿಸಿದ್ದು ಈ ಬಗ್ಗೆ ವಿಧಾನಸಭೆಯಲ್ಲಿ ಮಂಡನೆ ಮಾಡಲಿದ್ದೇವೆ ಅಂತ ಮಾಹಿತಿ ನೀಡಿದ್ರು. ಇನ್ನು ಕೆಲವೇ ದಿನಗಳಲ್ಲಿ ನಡೆಯುವ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಲಿದ್ದು ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗುವ ಸಾಧ್ಯತೆ ಇದೆ.
ಇನ್ನು ಪೂರ್ವ ವಿವಾಹ ಎಚ್ಐವಿ ಪರೀಕ್ಷೆಯನ್ನು ಮಲೇಷಿಯಾ, ಅಫ್ರಿಕಾ ಸೇರಿದಂತೆ ವಿಶ್ವದ 25 ದೇಶಗಳು ಖಡ್ಡಾಯಗೊಳಿಸಿದ್ದು, ಪರೀಕ್ಷೆಯನ್ನು ಉಚಿತವಾಗಿ ನಡೆಸುವ ಸೌಲಭ್ಯವನ್ನೂ ಒದಗಿಸಿದೆ.
ಆಧಾರ್ ಕಾರ್ಡ್ ಹೊಸ ಆದೇಶ..!ಮಿಸ್ ಮಾಡದೇ ಈ ವಿಡಿಯೋ ನೋಡಿ