ಬೇಕಾಗುವ ಸಾಮಗ್ರಿ: ಒಂದು ಕಪ್ ಹೂಕೋಸು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಸಣ್ಣಗೆ ಹೆಚ್ಚಿದ ಹಸಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, ಕುಟ್ಟಿ ಪುಡಿ ಮಾಡಿದ ಕೊತ್ತೊಂಬರಿ ಕಾಳು ಅರ್ಧ ಸ್ಪೂನ್, 1 ಸ್ಪೂನ್ ಜೀರಿಗೆ ಮತ್ತು ಓಮ, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಸ್ಪೂನ್ ಆಮ್ಚುರ್ ಪುಡಿ ಅಥವಾ ಚಾಟ್ ಮಸಾಲೆ ಪುಡಿ, ಅರ್ಧ ಸ್ಪೂನ್ ಅಥವಾ ನಿಮಗೆಷ್ಟು ಸ್ಪೂನ್ ಬೇಕೋ, ಅಷ್ಟು ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಹೂಕೋಸನ್ನು ಚೆನ್ನಾಗಿ ತೊಳೆದು, ಬಿಸಿ ನೀರಿಗೆ ಹಾಕಿ, ಕೊಂಚ ಬೇಯಿಸಿ, ಬಳಿಕ ಮಿಕ್ಸಿಂಗ್ ಬೌಲ್‌ಗೆ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕೊತ್ತೊಂಬರಿ ಕಾಳು, ಜೀರಿಗೆ, ವೋಮ, ಚಿಲ್ಲಿ ಫ್ಲೇಕ್ಸ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಾಟ್ ಮಸಾಲೆ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊನೆಗೆ ಬೇಯಿಸಿದ ಹೂಕೋಸು ಸೇರಿಸಿ. ಬಳಿಕ ಕಾಲು ಕಪ್ ಕಡಲೆ ಹಿಟ್ಟು, 2 ಸ್ಪೂನ್ ಅಕ್ಕಿ ಹುಡಿ ಮಿಕ್ಸ್ ಮಾಡಿ, ಕಟ್ಲೇಟ್ ಹಿಟ್ಟು ತಯಾರಿಸಿ.
ಬಳಿಕ ಕಟ್ಲೇಟ್ ಶೇಪ್ ಕೊಟ್ಟು, ಎಣ್ಣೆಯಲ್ಲಿ ಮಂದ ಉರಿಯಲ್ಲಿ, ಲೈಟ್ ಕಂದು ಬಣ್ಣ ಬರುವವರೆಗೂ ಕಾಯಿಸಿದರೆ, ಗೋಬಿ ಕಟ್ಲೇಟ್ ರೆಡಿ. ಟೊಮೆಟೊ ಸಾಸ್ ಒಟ್ಟಿಗೆ ಇದನ್ನು ಸವಿಯಬಹುದು.