ಬರ್ಮಿಂಗ್ ಹ್ಯಾಮ್:ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಬರ್ಮಿಂಗ್ ಹ್ಯಾಮನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.
ಮಹಿಳೆಯರ 44 ಕೆ.ಜಿ.ವಿಭಾಗದಲ್ಲಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತಿ (88 ಕೆಜಿ -113 ಕೆಜಿ) ಸ್ವರ್ಣಕ್ಕೆ ಮುತ್ತಿಕ್ಕಿದರು. ಎರಡನೆ ಸ್ಪರ್ಧೆಗಿಂತ 29 ಕೆಜಿ ಭಾರ ಎತ್ತಿ ಮೊದಲ ಸ್ಥಾನ ಪಡೆದರು.
ಮಾರಿಷಸ್ ನ ರೊಯ್ಲ್ಯ ಒಟ್ಟು 172 ಕೆಜಿ (76 ಕೆಜಿ,96ಕೆಜಿ) ಬೆಳ್ಳಿ ಗೆದ್ದರೆ, ಕೆನಡಾದ ದಹಾನ್ಹ ಕಿಮಿನ್ಸಸ್ಕಿ 171ಕೆಜಿ ಎತ್ತಿ ಕಂಚು ಗೆದ್ದರು.
ಸ್ನ್ಯಾಚ್ ನಲ್ಲಿ 88ಕೆ.ಜಿ ತೂಕ ಎತ್ತುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಬರೆದರು. ಜೊತೆಗೆ ವೈಯಕ್ತಿಕ ಶ್ರೇಷ್ಠ ಪ್ರದರ್ಶನವನ್ನುಸರಿಗಟ್ಟಿದರು.
ಈ ವಿಭಾಗದಲ್ಲಿ 12 ಕೆಜಿ. ಹೆಚ್ಚು ತೂಕ ಎತ್ತಿ ಭಾರೀ ಮುನ್ನಡೆ ಪಡೆದರು. ಕ್ಲೀನ್ ಅಂಡ್ ಜರ್ಕ್ ವಿಭಾಗದ ಮೊದಲ ಯತ್ನದಲ್ಲೆ 109 ಕೆಜಿ ಭಾರ ಎತ್ತಿ ಚಿನ್ನವನ್ನು ಖಚಿತ ಪಡಿಸಿದರು.
2ನೇ ಯತ್ನದಲ್ಲಿ 113 ಕೆ.ಜಿ. ಮೂರನೆ ಪ್ರಯತ್ನದಲ್ಲಿ 115 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ 113 ಕೆಜಿ ಭಾರ ಎತ್ತಿ ಕೂಟ ದಾಖಲೆ ಬರೆದರು.,