www.karnatakatv.net
ಸಾಮಾಜಿಕ ಜಾಲತಾಣದಲ್ಲಿಯೇ ಪ್ರಸಿದ್ದಿಯನ್ನು ಪಡೆದಿರುವ ಯೂಟ್ಯೂಬ್ ಇತ್ತೀಚೆಗೆ ಮಹತ್ವದ ಕಾರ್ಯವೊಂದಕ್ಕೆ ಕೈ ಹಾಕಲು ಹೊರಟಿದೆ. ಅದೇನೆಂದರೆ ಯೂಟ್ಯೂಬ್ ಕ್ರಿಯೇಟರ್ಸ್ ಡಿಸ್ ಲೈಕ್ ದಾಳಿನಡೆಯುತ್ತಿರುವುದನ್ನು ಕಂಪನಿ ಗಮನಿಸಿದ್ದು ,ಅದಕ್ಕೆ ಬ್ರೇಕ್ ಹಾಕಲು ಈ ನಿಧಾರವನ್ನು ತೆಗೆದುಕೊಂಡಿದೆ .
ಯೂಟ್ಯೂಬ್ ಕಂಪನಿ ಟ್ವೀಟ್ ಮೂಲಕ ಈ ನಿರ್ಧಾರವನ್ನು ಘೊಷಣೆ ಮಾಡಿದೆ . ಡಿಸ್ ಲೈಕ್‌ಗಳು ಕ್ರಿಯೇರ‍್ಸ್ ಗಳ ಮೇಲೆ ಪರಿಣಾಮ ಬೀರುತ್ತವೆ . ಇದನ್ನು ಸಾಕಷ್ಟು ಸಂಶೋಧನೆ ಹಾಗು ಪರೀಕ್ಷೆಯ ಬಳಿಕ ಈ ನಿರ್ಧಾರವನ್ನು ಪರಿಗಣಿಸಲಾಗಿದೆ . ಎಂದು ಯೂಟ್ಯೂಬ್ ಟ್ವೀಟ್‌ನಲ್ಲಿ ತಿಳಿಸಿದೆ .
ಡಿಸ್ ಲೈಕ್ ಬಟನ್ ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ , ಪರ್ಯಾಯವಾಗಿ ಸಾರ್ವಜನಿಕರಿಗೆ ಡಿಸ್ ಲೈಕ್‌ಕಾಣದಂತೆ ಮರೆಮಾಚಲಿದೆ . ಇಷ್ಟವಿಲ್ಲದವರು ಡಿಸ್ ಲೈಕ್ ಮಾಡಬಹುದು . ಆದರೆ , ಎಷ್ಟು ಡಿಸ್ ಲೈಕ್ ಆಗಿದೆ ಎಂಬುದು ಇನ್ಮುಂದೆ ಕಾಣುವುದಿಲ್ಲ , ಕ್ರಿಯೆಟರ್ಸ್ ಫೀಡ್‌ಬ್ಯಾಕ್ ಗಾಗಿ ಡಿಸ್ ಲೈಕ್ ಕೌಂಟ್ ಅವರಿಗೆ ಮಾತ್ರ ಕಾಣಲಿದೆ .
ಜನರ ಅನುಮಾನ ಮತ್ತು ಕಿರುಕುಳ ತಪ್ಪಿಸಲು ಇದು ಸಹಕಾರಿಯಾಗಲಿದೆ ಎಂದು ಯೂಟ್ಯುಬ್ ಹೇಳಿದೆ .
ಯೂಟ್ಯೂಬ್ ಅಲ್ಲದೆ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂ ಕೂಡ ಡಿಸ್ ಲೈಕ್ ಆಯ್ಕೆಯನ್ನು ಮರೆಮಾಚಿದೆ . ಇದೆಲ್ಲವು ಬಳಕೆದಾರರು ,ಹೊಸ ಕ್ರಿಯೇಟರ್ಸ್ ಗಳನ್ನು
ಗಳ ಕಿರುಕುಳವನ್ನು ತಪ್ಪಿಸಿ ಅವರನ್ನು ಬೆಳೆಸುವುದು ಕಂಪನಿಗಳ ಉದ್ದೇಶವಾಗಿದೆ .