ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಇಂದು ಚಿತ್ರರಂಗದಿoದ `ಪುನೀತ್ ನಮನ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದರೆ ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಅವಕಾಶವಿಲ್ಲ.
ಇದರಿಂದಾಗಿ ಪುನೀತ್ ಅಭಿಮಾನಿಗಳು ಬೇಸಗೊಂಡಿದ್ದರು. ಆದರೀಗ ಅಭಿಮಾನಿಗಳಿಗಾಗಿ ಹೊಸ ಸಿದ್ದಿಯೊಂದು ಹೊರಬಿದ್ದಿದೆ.
ಇಂದಿನ ಪುನೀತ್ ನಮನ ಕಾರ್ಯಕ್ರಮದಲ್ಲಿ ಚಿತ್ರರಂಗದವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಅವಕಾಶವಿಲ್ಲ. ಹಾಗಾಗಿ ಬೇರೊಂದು ದಿನ ಅಭಿಮಾನಿಗಳಿಗಾಗಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ನಿರ್ಮಾಪಕ ಸಾ.ರಾ,ಗೋವಿಂದು ತಿಳಿಸಿದ್ದಾರೆ.
ಪುನೀತ್ ಅಭಿಮಾನಿಗಳಿಗಾಗಿಯೆ ಬೇರೊಂದು ಕಾರ್ಯಕ್ರಮವನ್ನು ಬೆಂಗಳೂರು, ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ನಡೆಸಲು ಚಿಂತನೆ ನಡೆದಿದೆ. ಈ ಬಗ್ಗೆ ರಾಜ್ ಕುಟುಂಬ ಹಾಗೂ ಚಿತ್ರರಂಗದೊoದಿಗೆ ಚರ್ಚಿಸಿ ಯಾವಾಗ ನಡೆಸಲಾಗುವುದು ಎಂದು ತಿಳಿಸುವುದಾಗಿ ಹೇಳಿದರು.



