ಗೂಗಲ್ ಪೇ, ಫೋನ್‌ ಪೇ ಬಳಕೆದಾರರೇ ಗಮನಿಸಿ, ಏ.1ರಿಂದ ಹೊಸ ನಿಯಮ ಜಾರಿ

News: ಗೂಗಲ್ ಪೇ, ಫೋನ್‌ ಪೇ ಬಳಕೆದಾರಿಗೆ ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿಯಾಗಲಿದೆ. ಭಾರತ ರಾಷ್ಟ್ರೀಯ ಪಾವತಿ ನಿಗಮದಿಂದ ಈ ನಿಯಮಗಳು ಜಾರಿಗೆ ಬರಲಿದ್ದು, 1ಕ್ಕಿಂತ ಹೆಚ್ಚು ಗೂಗಲ್ ಪೇ ನಂಬರ್ ಹೊಂದಿದ್ದರೆ, ಮತ್ತು ಆ ನಂಬರ್ ಬಳಸದೇ ಹಾಗೇ ಉಳಿದಿದ್ದರೆ, ಆ ನಂಬರ್‌ನ್ನು ಗೂಗಲ್‌ ಪೇನಿಂದ ತೆಗೆದುಹಾಕಲಾಗುತ್ತದೆ.

ಯಾವ ನಂಬರ್ ಚಾಲ್ತಿಯಲ್ಲಿ ಇಲ್ಲವೋ, ಅಂಥ ನಂಬರ್‌ಗಳು ಗೂಗಲ್‌ ಪೇನಲ್ಲಿದ್ದರೆ, ಅಂಥ ನಂಬರ್‌ನ್ನು ಗೂಗಲ್ ಪೇನಿಂದ ತೆಗೆದು ಹಾಕಲಾಗುತ್ತದೆ. ಅಲ್ಲದೇ ಓರ್ವ ವ್ಯಕ್ತಿ ಒಂದೇ ನಂಬರ್‌ಕಿಂತ ಹೆಚ್ಚಿನ ಗೂಗಲ್ ಪೇ ಫೋನ್‌ ನಂಬರ್ ಹೊಂದುವಂತಿಲ್ಲ ಎಂಬ ನಿಯಮ ಕೂಡ ಜಾರಿಗೆ ಬರಲಿದೆ.

ಯಾವ ನಂಬರ್ ಸಕ್ರೀಯವಾಗಿಲ್ಲವೋ, ಅಂಥ ನಂಬರ್ ಏನಾದ್ರೂ ಬ್ಯಾಂಕ್‌ ಅಕೌಂಟ್‌ನಲ್ಲಿದ್ದರೆ, ಅದನ್ನು ತೆಗೆದು ಹಾಕಬೇಕು. ಯುಪಿಐ ವಹಿವಾಟುಗಳ ಸುತ್ತಲಿನ ಭದ್ರತೆಯನ್ನು ಬಿಗಿಗೊಳಿಸುವ ಸಲುವಾಗಿ, ಈ ರೀತಿ ಕ್ರಮ ಜರುಗಿಸಲಾಗುತ್ತಿದೆ. ಇಂಥ ನಿಯಮ ಬಂದರೆ, ಅನಧಿಕೃತ ವಹಿವಾಟುಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಮತ್ತು ಬಳಕೆದಾರರಿಗೆ ಸುರಕ್ಷಿತ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ.

ಆನ್‌ಲೈನ್ ಆರ್ಥಿಕ ಚಟುವಟಿಕೆಗಳನ್ನು ಸುರಕ್ಷಿತವಾಗಿ ನಿಭಾಯಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಬಳಕೆದಾರರು ಈ ಒಪ್ಪಿಗೆ ಆಯ್ಕೆ ಮಾಡದಿದ್ದರೆ, ಅಥವಾ ಮೊಬೈಲ್ ಸಂಖ್ಯೆ ನವೀಕರಿಸಲು ವಿಫಲವಾದರೆ, ಆ ನಿರ್ದಿಷ್ಠ ಮೊಬೈಲ್ ಸಂಖ್ಯೆಯೊಂದಿಗೆ ಯಾವುದೇ ಯುಪಿಐ ವಹಿವಾಟನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

About The Author