ಕೆ. ಎಸ್. ಡಿ.ಎಂ.ಎಫ್ ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೌರೀಶ್ ಅಕ್ಕಿ ಆಯ್ಕೆ. ಬೆಂಗಳೂರು: ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ ಇಂದು ಅಸ್ತಿತ್ವಕ್ಕೆ ಬಂದಿದೆ. ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೌರೀಶ್ ಅಕ್ಕಿ ಅವರು ಆಯ್ಕೆಯಾಗಿದ್ದಾರೆ. ಆ ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ ಉದ್ಘಾಟನೆಯಾಗಿದೆ, ನನ್ನ ಸ್ನೇಹಿತರು ಹಾಗೂ ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಸರ್ ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ನಾವೆಲ್ಲ ಒಳ್ಳೆ ಕೆ ಪೋಷನ್ ಗಳಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ. ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗೆ ಇರುವ ಆಫೀಸ್ ನ ಕೊರತೆ ಡಿಜಿಟಲ್ ಮೀಡಿಯಾದ ಇದೆ.ಇದರ ವೀಕ್ನೆಸ್ಸ್ ಎಂದರೆ ಡಿಜಿಟಲ್ ಮೀಡಿಯಾ ವನ್ನು ಯಾರು ಬೇಕಾದರೂ ದೇಶದ ಮೂಲೆ ಮೂಲೆಯ ಕುಗ್ರಾಮದ ವ್ಯಕ್ತಿಯಾದರೂ ಸ್ಥಾಪನೆ ಮಾಡಬಹುದು ಆದ್ದರಿಂದ ಇದರ ಗುಣಮಟ್ಟದಲ್ಲಿ ಕೊರತೆಯಾಗುತ್ತದೆ. ಇದರ ಗುಣಮಟ್ಟ ಉಳಿಸಿಕೊಂಡು ಹಾಗೂ ನಡೆಸಿಕೊಂಡು ಹೋಗುವ ದೃಷ್ಟಿಯಲ್ಲಿ ಇದು ಮೊದಲ ಹೆಜ್ಜೆ ಅನೇಕ ಹಿರಿಯ ಪತ್ರಕರ್ತರು ಇದರಲ್ಲಿ ಸೇರಿದ್ದಾರೆ, ಅದರಲ್ಲಿ ನಾನು ಒಬ್ಬ ಒಳ್ಳೆಯ ಪಾತ್ರ ನಿರ್ವಹಿಸುವ ಆಶೀರ್ವಾದದೊಂದಿಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಸ್ಥಾಪನೆ ಯಾಗಿದೆ ಎಂದು ಹೇಳಿದರು.