Raichur : ಹಳೆ ವಿದ್ಯಾರ್ಥಿಗಳ ಅಭಿಮಾನದಿಂದಾಗಿ ಆ ಸರ್ಕಾರ ಶಾಲೆಯ ಅದೃಷ್ಟ ಬದಲಾಗಿದೆ . ಗಬ್ಬೆದ್ದು ಹೋಗಿದ್ದ ಶಾಲೆಗೆ ಹೊಸ ಹಳೆ ಬಂದಿದೆ . ಶಾಲೆಗೆ ಬರೊದ್ದಕ್ಕೆ ಹಿಂಜರಿಯುತ್ತಿದ್ದ ಮಕ್ಕಳು ಈಗ ಖುಷಿ ಖುಷಿಯಾಗಿ ಓಡೊಡಿ ಸ್ಕೂಲ್ ಗೆ ಬರುತ್ತಿದ್ದಾರೆ . ಈಗೆ ರಂಗು ರಂಗಾಗಿ ಕಂಗೊಳಿಸುತ್ತಿರುವ ಶಾಲೆ. ಕಲರ್ ಫುಲ್ ಬರಹಗಳು, ಖುಷಿ ಖುಷಿಯಾಗಿ ಪಾಠ ಕೇಳುತ್ತಿರುವ ಮಕ್ಕಳು. ಈ ದೃಶ್ಯ ಕಂಡು ಬಂದಿದ್ದು ರಾಯಚೂರು ತಾಲ್ಲೂಕಿನ ಯರಮರಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ . ಹೌದು ಇದು 60 ವರ್ಷದ ಹಳೆಯ ಕಟ್ಟಡ ವಾಗಿದ್ದು 30 ವರ್ಷದಿಂದ ಯಾವುದೇ ಸುಣ್ಣ ಬಣ್ಣ ಕಾಣದೇ ಬೀಳು ಬಿದ್ದಿರುವ ಕೊಂಪೆಯಾಗಿತ್ತು . ಈ ಶಾಲೆಗೆ ಮಕ್ಕಳು ಬರಲು ಹಿಂಜರಿತ ಇದ್ದರು . ಇತ್ತ ಕಡೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತು . ಆದರೆ ಶಾಲೆಯ ಶಿಕ್ಷಕರ ಗೊಳು ಕೆಳುವವರೇ ಇಲ್ಲದಂತಾಗಿತ್ತು . ಇನ್ನೂ ಹಳೆಯ ವಿದ್ಯಾರ್ಥಿಗಳನ್ನು ಕೆಳಿಕೊಂಡಾಗ ಈ ಪರಿಸ್ಥಿತಿ ನೋಡಿ ಹಳೆಯ ವಿದ್ಯಾರ್ಥಿಗಳುಶಾಲೆಯ ಚಿತ್ರಣವನ್ನು ಬದಲಾಯಿಸಿದರು. ಇನ್ನೂ ಆ ಹಳೆಯ ವಿದ್ಯಾರ್ಥಿಗಳು , ಊರಿನ ಗ್ರಾಮಸ್ಥರು ಹಾಗೂ ನಗರ ಸಭೆ ಸದಸ್ಯರ ಸಹಾಯ ದೊಂದಿಗೆ ಶಾಲೆಗೆ ಬಾಗಿಲು , ಕಿಟಕಿ ಗಳ ರಿಪೇರಿ ಹಾಗೂಕಟ್ಟಡ ದುರಸ್ತಿ ಗೆ ಪ್ಯಸ್ಟರಿಂಗ್ ಮಾಡಲಾಗಿದೆ.
ಶಾಲೆಯ ಗೋಡೆಗಳಿಗೆ ಹಾಗೂ ಕಂಪೋಂಡ್ಗೆ ಬಣ್ಣ ಬಡಿಸಿದ್ದಾರೆ. ಶಾಲೆಯ ಗೋಡೆಗೆ ರಾಷ್ಟ್ರದ ಮಹಾತ್ಮರ ಭಾವಚಿತ್ರ ಗಳು, ಆಕರ್ಷಕ ಬರಹಗಳು ಬರೆದಿದ್ದಾರೆ . ಲಕ್ಷಾಂತರ ಹಣ ಖರ್ಚು ಮಾಡಿ ಉತ್ತಮ ಶೈಕ್ಷಣಿಕ ವಾತಾವರಣ ನೀರ್ಮಾಣ ಮಾಡಿದ್ದಾರೆ. ಈ ಕಾರ್ಯಕ್ಕೆ ಶಾಲೆಯ ಶಿಕ್ಷಕರು ಸಾಥ್ ನೀಡಿದ್ದು , ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ . ಇನ್ನೂ ಶಾಲೆಯ ಸೂತ ಗ್ರೀನ್ ರಾಯಚೂರು ಸಹಯೋಗದಲ್ಲಿ ೫೦ ಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ . ಒಟ್ಟಾರೆ ಹಳೆ ಶಾಲೆ ಅಭಿಮಾನಕ್ಕೆ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲಾಗಿದೆ . ಸರ್ಕಾರ ಮಾಡಬೇಕಾದ ಕೆಲಸ ಹಳೆಯ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ . ಏನೇ ಆಗಲಿ ಇವರ ಕಾರ್ಯಕ್ಕೆಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು