ಬೆಂಗಳೂರು: ಕಳೆದ ಐದು ವರ್ಷದಿಂದ ರಾಜ್ಯಾದ್ಯಾಂತ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪನೆ ಮಾಡಿ ಸರ್ಕಾರ 5 ರೂಪಾಯಿಗೆ ಒಂದು ಕ್ಯಾನ್ ನೀರು ಪೂರೈಕೆ ಮಾಡ್ತಿದೆ. 5 ರೂಪಾಯಿ ಕಾಯಿನ್ ಬಳಕೆ ಬದಲು ಇದೀಗ ಸ್ಮಾರ್ಟ್ ಕಾರ್ಡ್ ವಿತರಿಸೋಕೆ ನಿರ್ಧರಿಸಿದ್ದು ಶೀಘ್ರವೇ ಸ್ಮಾರ್ಟ್ ಕಾರ್ಡ್ ಜಾರಿಗೆ ಬರಲಿದೆ.
ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ರಾಜ್ಯ ಸರ್ಕಾರ ಹೊಸದಾಗಿ 16 ಸಾವಿರ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಿದ್ದು, 5 ರೂಪಾಯಿ ಕಾಯಿನ್ ಬದಲು ಸ್ಮಾರ್ಟ್ ಕಾರ್ಡ್ ವಿತರಿಸಲು ಚಿಂತಿಸಿದ್ದು, ಇದಕ್ಕಾಗಿ 233 ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದೇವೆ ಎಂದರು. ಆದ್ರೆ ಸದ್ಯಕ್ಕೆ ಬಳಕೆಯಾಗ್ತಿರೋ 5 ರೂಪಾಯಿ ಕಾಯಿನ್ ಪದ್ಧತಿಯೇ ಜನರಿಗೆ ಉಪಯೋಗವಾಗ್ತಿದ್ದು ಸ್ಮಾರ್ಟ್ ಕಾರ್ಡ್ ಸೌಲಭ್ಯದಿಂದ ಮುಂದೆ ಹಲವು ಸಮಸ್ಯೆ ಎದುರಾಗಬಹುದು ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗ್ಯಾಸ್ಟ್ರಿಕ್ ನಿಂದ ಪಾರಾಗಲು ಇಲ್ಲಿದೆ ಸುಲಭ ಉಪಾಯ…! ತಪ್ಪದೇ ಈ ವಿಡಿಯೋ ನೋಡಿ