Saturday, December 21, 2024

Latest Posts

ವರುಣನನ್ನು ಓಲೈಸೋಕೆ ಸರ್ಕಸ್- ಬೆಳಗ್ಗಿನಂದಲೇ ಡಿಕೆಶಿ ಬ್ಯುಸಿ

- Advertisement -

ಚಿಕ್ಕಮಗಳೂರು: ರಾಜ್ಯದಲ್ಲಿ ಆವರಿಸಿರೋ ಬರಗಾಲದಿಂದ ಜಾನುವಾರುಗಳು, ರೈತರು ತತ್ತರಿಸಿಹೋಗಿದ್ದಾರೆ. ಬೆಳೆದ ಬೆಳಗೆ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದರೆ. ಹಲವಾರು ಜಿಲ್ಲೆಗಳಲ್ಲಿ ಕುಡಿಯಲೂ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ವರುಣ ದೇವನ ಮೊರೆ ಹೋಗಿದ್ದು ವಿವಿಧ ದೇವಾಲಗಳಲ್ಲಿ ಪೂಜೆ ಪುನಸ್ಕಾರಕ್ಕೆ ಮುಂದಾಗಿದೆ.

ತೀವ್ರ ಬರಗಾಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯಡಿ ಬರುವ ರಾಜ್ಯದ ನಾನಾ ದೇವಾಲಯಗಳಲ್ಲಿ ಮಳೆಯ ಆಗಮನಕ್ಕಾಗಿ ವಿಶೇಷ ಪೂಜೆ ಕೈಗೊಂಡಿದೆ. ಇಂದು ಬೆಳಗ್ಗಿನಿಂದಲೇ ಪೂಜೆ ನೆರವೇರುತ್ತಿದ್ದು ಅರ್ಚಕರು ಪರ್ಜನ್ಯ ಜಪದಲ್ಲಿ ನಿರತಾರಿದ್ದಾರೆ.

ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಇವತ್ತು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಶ್ರೀ ಋಷ್ಯ ಶೃಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ರು. ರಾಜ್ಯದಲ್ಲಿ ಸೂಕ್ತ ರೀತಿಯಲ್ಲಿ ಮಳೆಯಾಗಿ ಬರಗಾಲ ನೀಗಲಿ ಅಂತ ಶಿವಕುಮಾರ್ ಪ್ರಾರ್ಥನೆ ಸಲ್ಲಿಸಿದ್ರು. ಪೂಜೆಯಲ್ಲಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ ಕೂಡ ಭಾಗಿಯಾಗಿದ್ರು.

ಇನ್ನು ಮಡಿಕೇರಯ ಭಗಂಡೇಶ್ವರ, ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿ ದೇವಾಲಯ,ಮಲೆ ಮಹದೇಶ್ವರ ದೇಸ್ಥಾನ, ರಾಮನಗರ ಸೇರಿದಂತೆ ಮಳೆಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಪಂಚಾಮೃತ ಅಭಿಷೇಕ, ಜಲಾಮೃತ ಅಭಿಷೇಕ ಸೇರಿದಂತೆ ಹೋಮ-ಹವನ, ವಿಶೇಷ ಪೂಜೆಗಳು ನೆರವೇರಿಸಲಾಗುತ್ತಿದೆ.

ಕಳೆದ ವರ್ಷದಂತೆ ಈ ವರ್ಷವೂ ಬರಗಾಲ ಆವರಿಸುವ ಲಕ್ಷಣ ಗೋಚರಿಸುತ್ತಿರೋ ಹಿನ್ನೆಲೆಯಲ್ಲಿ ಮಳೆಗಾಲ ಆರಂಭಕ್ಕೂ ಮುನ್ನವೇ ಸರ್ಕಾರ ದೇವರ ಮೊರೆ ಹೋಗಿ ವರುಣ ದೇವನನ್ನು ಒಲಿಸಿಕೊಳ್ಳೋ ಪ್ರಯತ್ನ ನಡೆಸುತ್ತಿದೆ.

ಶೃಂಗೇರಿಯ ಋಷ್ಯಶೃಂಗೇಶ್ವರ ದೇವಸ್ಥಾನದಲ್ಲಿ ಸಚಿವರಾದ ಡಿ ಕೆ ಶಿವಕುಮಾರ್ ಮತ್ತು ಪಿ.ಟಿ.ಪರಮೇಶ್ವರ್ ನಾಯ್ಕ್

ಸಚಿವ ಡಿಕೆಶಿಗೆ ಮುಗಿದಿಲ್ಲ ಐಟಿ ಸಂಕಷ್ಟ…! ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss