Tuesday, October 15, 2024

Latest Posts

ಮದುವೆ ಗಂಡಿಗೆ ತಾಳಿ ಕಟ್ಟಿಸಿದ ಗಡಿಬಿಡಿ ಪುರೋಹಿತ…!!!

- Advertisement -

ಮಂಡ್ಯ: ವಧುವಿಗೆ ವರ ತಾಳಿ ಕಟ್ಟೋದು ಸಂಪ್ರದಾಯ. ಆದ್ರೆ ಕೆಲವರು ಈ ಶಾಸ್ತ್ರ ಸಂಪ್ರದಾಯ ಮೀರಿ ವರನಿಗೆ ವಧುವೇ ತಾಳಿ ಕಟ್ಟಿರೋ ಅದೆಷ್ಟೋ ನಿದರ್ಶನಗಳನ್ನ ನೋಡಿದ್ದೇವೆ. ಆದ್ರೆ ಇಲ್ಲಿ ಗೊಂದಲಗೊಂಡ ಪುರೋಹಿತರೇ ವಧುವಿನ ಕೈಗೆ ತಾಳಿ ಕೊಟ್ಟು ವರನಿಗೆ ಕಟ್ಟವಂತೆ ಹೇಳಿರೋ ಪ್ರಸಂಗ ನಡೆದಿದೆ.

ಮಂಡ್ಯದಲ್ಲಿ ಈ ಘಟನೆ ನಡೆದಿದ್ದು ತಾಳಿ ಕಟ್ಟೋ ಶಾಸ್ತ್ರಕ್ಕೂ ಮುನ್ನಾ ನಾನಾ ಶಾಸ್ತ್ರಗಳನ್ನು ಮಾಡಿಸಿ ಸುಸ್ತಾಗಿಹೋಗಿದ್ದ ಪುರೋಹಿತರು ತಾವೇ ವಧುವಿನ ಕೈಗೆ ತಾಳಿ ನೀಡಿ ವರನಿಗೆ ಕಟ್ಟುವಂತೆ ಗಡಿಬಿಡಿಯಲ್ಲಿ ಹೇಳಿಬಿಟ್ಟಿದ್ದಾರೆ. ಇದನ್ನು ನೋಡುತ್ತಾ ನಿಂತಿದ್ದ ವಧೂ-ವರರಿಗೂ ಏನ್ ನಡೀತಾ ಇದೆ ಅನ್ನೋದು ಗೊತ್ತೇ ಆಗಲಿಲ್ಲ. ಅಲ್ಲಿದ್ದ ಬಂಧು-ಮಿತ್ರರೂ ಕೂಡ ಒಂದು ಕ್ಷಣ ಅವಾಕ್ಕಾಗಿ ನೋಡುತ್ತಾ ನಿಂತಿದ್ರು. ಆದ್ರೆ ತಕ್ಷಣ ಎಚ್ಚೆತ್ತುಕೊಂಡ ಪುರೋಹಿತರು ತಾಳಿ ಕಟ್ಟುತ್ತಿದ್ದ ವಧುವನ್ನು ತಡೆದು ವರನ ಕೈಗೆ ಕೊಟ್ಟು ತಾಳಿ ಕಟ್ಟೋ ಶಾಸ್ತ್ರ ಮುಗಿಸಿದ್ರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮದುವೆ ಗಡಿಬಿಡಿಯಲ್ಲಿ ಏನೇನೆಲ್ಲಾ ಅವಾಂತರಗಳಾಗುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪೊಲೀಸ್ ಆಗ್ಬೇಕು ಅನ್ನೋರಿಗೆ ಇಲ್ಲಿದೆ ಗುಡ್ ನ್ಯೂಸ್. ಇಲಾಖೆಯಲ್ಲಿ ಖಾಲಿ ಇದೆ 2062 ಹುದ್ದೆ… !! ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss