Friday, October 18, 2024

Latest Posts

ವಿಶ್ವಕಪ್ನಲ್ಲಿ ಮೊಮ್ಮಗನ ಬೊಂಬಾಟ್ ಆಟ! ರಚಿನ್ಗೆ ದೃಷ್ಟಿ ತೆಗೆದ ಅಜ್ಜಿ…!

- Advertisement -

Sports News: ಶ್ರೀಲಂಕಾವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ 2023ರ ವಿಶ್ವಕಪ್‌ನ ಸೆಮಿಫೈನಲ್‌ಗೆ (World Cup 2023) ಬಹುತೇಕ ಅರ್ಹತೆ ಪಡೆದಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಪಾಯಿಂಟ್ಸ್ ಪಟ್ಟಿಯಲ್ಲಿ 10 ಅಂಕ ಗಳಿಸಿದೆ. ಕಿವೀಸ್ ತಂಡದ ರನ್ ರೇಟ್ ಕೂಡ ಉತ್ತಮವಾಗಿದೆ. ನ್ಯೂಜಿಲೆಂಡ್‌ನ ಈ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಆಸೆಯನ್ನು ಬಹುತೇಕ ಭಗ್ನಗೊಳಿಸಿದೆ. ಈ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಮೂಲದ ಕಿವೀಸ್‌ ಸ್ಟಾರ್ ಯುವ ಆಟಗಾರ ರಚಿನ್ ರವೀಂದ್ರ (Rachin Ravindra) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ಮತ್ತೊಮ್ಮೆ ಅಬ್ಬರಿಸಿದರು. ಆದರೆ ಇದರ ಬಳಿಕ ರಚಿನ್‌ ಅವರ ಅಜ್ಜಿ ಅವರಿಗೆ ದೃಷ್ಟಿ ತೆಗೆದ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

ಹೌದು, ನ್ಯೂಜಿಲ್ಯಾಂಡ್‌ ಆರಂಭಿಕ ಆಟಗಾರ ರಚಿನ್‌ ರವೀಂದ್ರ ಈ ಬಾರಿ ವಿಶ್ವಕಪ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಅಬ್ಬರಿಸುತ್ತಿದ್ದಾರೆ. ಅಲ್ಲದೇ ಬರೋಬ್ಬರಿ 3 ಶತಕ ಸಿಡಿಸುವ ಮೂಲಕ ರಚಿನ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದರ ಹಿಂದಿರುವುದು ಅವರ ಪರಿಶ್ರಮ ಎಂದು ನಿಸ್ಸಂದೇಹವಾಗಿ ಹೇಳಬಹುದು. ಇನ್ನು, ರಚಿನ್ ತನ್ನ ತವರಾದ ಬೆಂಗಳೂರಿನಲ್ಲಿ ನವೆಂಬರ್‌ 9ರಂದು ಲಂಕಾ ವಿರುದ್ಧ ವಿಶ್ವಕಪ್‌ ಪಂದ್ಯವನ್ನಾಡಿದರು. ಈ ವೇಳೆ ಅವರು ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದರು. ಆ ವೇಳೆ ರಚಿನ್ ಅವರ ಅಜ್ಜಿ ತನ್ನ ಮೊಮ್ಮಗನಿಗೆ ಪ್ರೀತಿಯಿಂದ ದೃಷ್ಟಿ ತೆಗೆದ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.

ಸಚಿನ್ ದಾಖಲೆ ಮುರಿದ ರಚಿನ್:

ಇನ್ನು, ಒಂದೇ ವಿಶ್ವಕಪ್‌ ಸೀಸನ್‌ನಲ್ಲಿ ಈವರೆಗೆ ಒಟ್ಟು 3 ಶತಕ ಸಿಡಿಸಿ ಮಿಂಚಿದ್ದಾರೆ. ಇದರ ನಡುವೆ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಹೌದು, 1996 ರ ವಿಶ್ವಕಪ್‌ನಲ್ಲಿ ತೆಂಡೂಲ್ಕರ್ ಅವರ 523 ರನ್‌ಗಳ ದಾಖಲೆಯನ್ನು ಇದೀಗ ರಚಿನ್‌ ರವೀಂದ್ರ ಹಿಂದಿಕ್ಕಿದ್ದಾರೆ. ಆ ಸಮಯದಲ್ಲಿ ಅವರಿಗೆ 23 ವರ್ಷ ವಯಸ್ಸಾಗಿತ್ತು. ವಿಶ್ವಕಪ್‌ನಲ್ಲಿ ಕಿವೀಸ್ ಪರ ಅತಿ ಹೆಚ್ಚು ರನ್ ಸ್ಕೋರರ್ ಸಹ ಆಗಿದ್ದಾರೆ. ಅಲ್ಲದೇ ಈ ಆವೃತ್ತಿಯ ವಿಶ್ವಕಪ್‌ನಲ್ಲಿ ರಚಿನ್‌ 9 ಪಂದ್ಯಗಳ ಲೀಗ್‌ ಅಂತ್ಯಕ್ಕೆ 565 ರನ್ಗಳಿಸುವ ಮೂಲಕ ಚೊಚ್ಚಲ ವಿಶ್ವಕಪ್‌ನಲ್ಲಿಯೇ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿದ್ದಾರೆ.

ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆಶಿಯವರನ್ನು ಯಾಕೆ ಭೇಟಿಯಾಗಿದ್ದು ಗೊತ್ತಾ..?

ಸತೀಶ್ ಜಾರಕಿಹೊಳಿ-ಡಿಕೆ ಸುರೇಶ್ ಮಹತ್ವದ ಭೇಟಿ! ಮಾತುಕತೆ ಬಳಿಕ ಡಿಕೆ ಬ್ರದರ್ ಅಂದಿದ್ದೇನು ಗೊತ್ತಾ?

‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘

- Advertisement -

Latest Posts

Don't Miss