ಕರಾವಳಿ ಭಾಗದ ಹಿಜಾಬ್ ವಿವಾದ (Hijab Controversy) ಈಗ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಈಗ ಈ ವಿವಾದ ಕುರಿತಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು (h d devegowda) ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿನ ಹಿಜಾಬ್ ವಿವಾದವನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡಬೇಕಾಗಿತ್ತು. ಆದರೆ ಈಗ ಇದು ತುಂಬಾ ಬೆಳವಣಿಗೆಯಾಗಿದೆ. ಹೀಗಾಗಿ ಕೋರ್ಟ್ ನಲ್ಲಿ (court) ವಿಚಾರಣೆ ನಡೆಯುತ್ತಿದೆ. ಕೋರ್ಟ್ ಏನು ತೀರ್ಪು ನೀಡುತ್ತದೆಯೋ ಅದನ್ನು ಒಪ್ಪಬೇಕೆಂದು ತಿಳಿಸಿದ್ದಾರೆ. ಇನ್ನು ಕೆಲವು ಮುಖಂಡರು ಜೆಡಿಎಸ್ (Some leaders are JDS) ತೊರೆಯುವುದಾಗಿ ಬಹಿರಂಗವಾಗಿ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವೆಲ್ಲಾ ಸೇರಿ ಪಕ್ಷ ಸಂಘಟನೆ ಮಾಡುವುದಕ್ಕೆ ಇನ್ನೂ ಸಮಯ ಮೀರಿಲ್ಲ, ಕೇವಲ 123 ಸೀಟುಗಳು ಪಡೆಯುವ ಗುರಿ ಎಂದು ಘೋಷಿಸುವುದು ಸಾಕಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.