ಹಿಜಬ್ ವಿವಾದ (Hijab Controversy) ಕುರಿತಂತೆ ರಾಜ್ಯ ಸರ್ಕಾರ (State Government) ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಘೋಷಿಸಿದ ಏಕರೂಪದ ಡ್ರೆಸ್ ಕೋಡ್ (Uniform dress code) ಅನ್ನು ಅನುಸರಿಸಬೇಕು ಎಂದು ಕರ್ನಾಟಕ ಶಿಕ್ಷಣ ಇಲಾಖೆ (Department of Education, Karnataka) ಶನಿವಾರ ನಿರ್ದೇಶನ ನೀಡಿದೆ. ಈ ಕುರಿತು ಮಾತನಾಡಿರುವ ಎಚ್ ಡಿ ಕುಮಾರಸ್ವಾಮಿ (H D Kumaraswamy) ರಾಜ್ಯ ಸರ್ಕಾರದ ವಿರುದ್ಧ ಮಾತಿನ ದಾಳಿಯನ್ನು ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜಕೀಯದಲ್ಲಿ ತೊಡಗಿರುವ ಸಣ್ಣಪುಟ್ಟ ಸಂಘಟನೆಗಳು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ (students of the Muslim community) ತೊಂದರೆ ಕೊಡಲು ಎನ್ನಿಸುತ್ತಿದೆ. ಬಿಜೆಪಿ ಸರ್ಕಾರ ಬೇಟಿ ಪಡಾವೋ ಬೇಟಿ ಬಚಾವೋ (Beti Padao Beti Bachao) ಎಂಬ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡುತ್ತಾರೆ. ಆದರೆ ಈಗ ಬೇಟಿ ಪಡಾವೋ ಬದಲಿಗೆ ಬೇಟಿ ಹಠಾವೋ (Beti Hathao) ಎಂದು ಬಿಜೆಪಿ ಸರ್ಕಾರ ಬದಲಾಯಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.