Krishi News: ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿರುವ ವರ್ತೂರ್ ಸಂತೋಷ್ ಅವರು, ನಿಜ ಜೀವನದಲ್ಲಿ ರೈತರು. ಕೆಲ ದಿನಗಳ ಹಿಂದೆ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳಕ್ಕೆ, ಅವರ ಎತ್ತುಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಅವುಗಳನ್ನು ತಂದಿದ್ದವರು, ಆ ಎತ್ತುಗಳ ಬಗ್ಗೆ, ವರ್ತೂರ್ ಸಂತೋಷ್ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಹಳ್ಳಿಕಾರ್ ವರ್ತೂರು ಸಂತೋಷ್ ಅವರದ್ದು ಒಂದು ಜೋಡೆತ್ತು ಮತ್ತು ಒಂದು ಒಂಟಿ ಎತ್ತು ಇದೆ. ಜೋಡೆತ್ತಿನ ಹೆಸರು ರಾಮ ಮತ್ತು ಲಕ್ಷ್ಮಣ. ಸಂತೋಷ್ ಅವರ ಸ್ನೇಹಿತರು ಸೇರಿ, ಈ ಕೃಷಿ ಮೇಳಕ್ಕೆ ಸಂತೋಷ್ ಅವರ ಎತ್ತುಗಳನ್ನು ತಂದಿದ್ದರು. ಅವುಗಳ ಹೆಸರು ಪುಣ್ಯಕೋಟಿ, ಲವ- ಕುಶ. ಈ ಎತ್ತುಗಳು ಸಂತೋಷ್ ಅವರ ಫೇವರಿಟ್ ಎತ್ತುಗಳಂತೆ.
ಇನ್ನು ಕೃಷಿ ಮೇಳಕ್ಕೆ ಬಂದ ಜನರೆಲ್ಲ, ಹಳ್ಳಿಕಾರ್ ಎತ್ತುಗಳ ಜೊತೆ ಸೆಲ್ಫಿ, ಎತ್ತುಗಳ ಫೋಟೋ ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಇನ್ನು ಸಂತೋಷ್ ಅವರ ಸ್ನೇಹಿತರು ಹೇಳುವಂತೆ, ಎತ್ತುಗಳು ಬಗ್ಗೆ ಉತ್ತಮ ರೆಸ್ಪಾನ್ಸ್ ಸಿಕ್ತಾ ಇದೆ. ಮೊದಲೆಲ್ಲ ಹಳ್ಳಿಕಾರ್ ಎತ್ತುಗಳ ಬಗ್ಗೆ ನಾವು ಹೇಳಬೇಕಿತ್ತು. ಆದರೆ ಈಗ ಜನರೇ ಗುರುತಿಸಿ, ಹಳ್ಳಿಕಾರ್ ಎತ್ತುಗಳ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಹಾಗಾದ್ರೆ ವರ್ತೂರ್ ಸಂತೋಷ್ ಅವರ ಎತ್ತುಗಳು ಹೇಗಿದೆ..? ಅವುಗಳ ವಿಶೇಷತೆಗಳೇನು ಅಂತಾ ತಿಳಿಯಲು ನೀವು ಈ ವೀಡಿಯೋ ನೋಡಬೇಕು.
ಎಚ್‌ಡಿಕೆ ಜತೆ ಸಿದ್ದರಾಮಯ್ಯ ಕೂಡಾ ದತ್ತಪೀಠಕ್ಕೆ ಬರಲಿ ಎಂದ ಸಿ.ಟಿ ರವಿ