Thursday, February 13, 2025

Latest Posts

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ಇನ್ನಿಲ್ಲ: ಇಸ್ರೇಲ್ ಘೋಷಣೆ

- Advertisement -

International News: ಇಸ್ರೇಲ್ ಹಮಾಸ್ ಯುದ್ಧ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡರೂ, ಯುದ್ಧ ಮಾತ್ರ ಇನ್ನೂ ನಿಂತಿಲ್ಲ. ಇದೀಗ ಇಸ್ರೇಲ್ ಇನ್ನೊಂದು ಸುದ್ದಿ ನೀಡಿದ್ದು, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯಾಗಿದೆ ಎಂದಿದ್ದಾರೆ.

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ಹಂತಕ ಯಾಹ್ಯಾನನ್ನು ಹತ್ಯೆ ಮಾಡಲಾಗಿದೆ. ಇನ್ನು ಈತನೇ ಇಸ್ರೇಲ್‌ ಮೇಲೆ 2023ರಲ್ಲಿ ನಡೆದ ದಾಳಿಯ ರೂವಾರಿಯಾಗಿದ್ದ. ಈ ಯುದ್ಧಕ್ಕೆ ನಾಂದಿ ಹಾಡಿದ್ದೇ ಯಾಹ್ಯಾ ಎನ್ನಲಾಗಿದೆ. ಹಾಗಾಗಿಯೇ ಇದೀಗ ಯಾಹ್ಯಾನನ್ನು ಹತ್ಯೆ ಮಾಡುವ ಮೂಲಕ, ಇಸ್ರೇಲ್ ಸೇಡು ತೀರಿಸಿಕೊಂಡಿದೆ.

ಈ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, ನಾವು ಹಮಾಸ್ ಉಗ್ರರ ಸರ್ವನಾಶ ಮಾಡುವವರೆಗೂ ಸುಮ್ಮನೆ ಕೂರುವವರಲ್ಲ. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆ ಎಂದಿದ್ದರು. ಅದೇ ರೀತಿ ಸತತ ಒಂದು ವರ್ಷಗಳಿಂದ ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆ ನಡೆಸಿ, ಹಲವು ಹಮಾಸ್ ಉಗ್ರರ ಹತ್ಯೆ ಮಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.

- Advertisement -

Latest Posts

Don't Miss