Sunday, September 8, 2024

Latest Posts

50 ವರ್ಷ ಪೂರೈಸಿದ ಸೌರವ್ ದಾದಾ

- Advertisement -

ಮುಂಬೈ: ಭಾರತದ ಲೆಜೆಂಡರಿ ನಾಯಕ ಸೌರವ್ ಗಂಗೂಲಿ ಶುಕ್ರವಾರ ಜುಲೈ 8 ರಂದು 50 ವರ್ಷಗಳನ್ನು ಪೂರೈಸಿದರು. ದಾದಾ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದಾರೆ. ಅವರು 2019 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್‌ನ ಯೋಗಕ್ಷೇಮಕ್ಕಾಗಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ.

ಈ ಮೊದಲು ಗಂಗೂಲಿ ಜನವರಿ 1992ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯದ ಮೂಲಕ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದರು. ನಂತರ 15 ವರ್ಷಗಳ ಕಾಲ ಭಾರತಕ್ಕೆ ಸೇವೆ ಸಲ್ಲಿಸಿದರು. ಗಂಗೂಲಿ ಅವರ ವೃತ್ತಿಜೀವನವು 1996 ರಲ್ಲಿ  ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮಿಂಚುವ ಶತಕವನ್ನು ಗಳಿಸಿದಾಗಿನಿಂದ  ಉತ್ತುಂಗದ ಮೆಟ್ಟಿಲೇರಿದ ಅವರು ಅಲ್ಲಿಂದ ಮುಂದೆ ಹಿಂತಿರುಗಿ ನೋಡಲಿಲ್ಲ.

2001 ರಲ್ಲಿ, ಅವರು ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ 2-1 ಅಂತರದ ಅದ್ಭುತ ವಿಜಯಕ್ಕೆ ಕಾರಣರಾಗಿದ್ದರು. ಅದರ ನಂತರ, ಅವರು 2003ರ ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕನಾಗಿ ತಂಡವನ್ನು ಫೈನಲ್‌ನತ್ತ ಕೊಂಡಯ್ಯುವಲ್ಲಿ ಯಶಸ್ವಿಯಾಗಿದ್ದರು.

ಗಂಗೂಲಿ  ಒಟ್ಟು 113 ಟೆಸ್ಟ್ ಮತ್ತು 311 ಏಕದಿನಗಳಲ್ಲಿ, 38 ಶತಕಗಳು ಮತ್ತು 107 ಅರ್ಧ ಶತಕಗಳ ಸಹಾಯದಿಂದ 7,212 ಮತ್ತು 11,363 ರನ್ ಗಳಿಸಿದ್ದರು. ಆಲ್ ರೌಂಡರ್ ಆಗಿದ್ದ  ಅವರು ಭಾರತದ ಪರ 132 ವಿಕೆಟ್‌ಗಳನ್ನು ಕೂಡಾ ಪಡೆದಿದ್ದರು.

 

ಬಾಡ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನಕ್ಕೆ ವ್ಯವಸ್ಥೆ: ಮುಖ್ಯಮಂತ್ರಿ ಸೂಚನೆ

- Advertisement -

Latest Posts

Don't Miss