Tuesday, April 15, 2025

Latest Posts

ಸೇಡು ತೀರಿಸಿಕೊಂಡ ರೋಹಿತ್ ಪಡೆ

- Advertisement -

ದುಬೈ : ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ವೇಗಿ ಭುವನೇಶ್ವರ್ ಕುಮಾರ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ  ಏಷ್ಯಾಕಪ್ ಟೂರ್ನಿಯಲ್ಲಿ 5 ವಿಕೆಟ್‍ಗಳ ಗೆಲುವು ದಾಖಲಿಸಿ ಶುಭಾರಂಭ  ಮಾಡಿದೆ.

ಇಲ್ಲಿನ ದುಬೈ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ಥಾನ ತಂಡ 19.5 ಓವರ್‍ಗಳಲ್ಲಿ 147 ರನ್‍ಗಳಿಗೆ ಆಲೌಟ್ ಆಯಿತು.  ಭಾರತ ತಂಡ 19.4 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.

148 ರನ್ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕನ್ನಡಿಗ ಕೆ.ಎಲ್. ರಾಹುಲ್ (0) ವೇಗಿ ನಾಸೀಮ್ ಶಾ ಎಸೆತದಲ್ಲಿ  ಬೌಲ್ಡ್ ಆದರು. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡಿ ತಂಡದ ಕುಸಿತ ತಡೆದರು. ಈ ವೇಳೆ ದಾಳಿಗಿಳಿದ ಮೊಹಮದ್ ನವಾಜ್ ನಾಯಕ ರೋಹಿತ್ ಶರ್ಮಾ (12 ರನ್) ಮತ್ತು ವಿರಾಟ್ ಕೊಹ್ಲಿ (35ರನ್) ಅವರುಗಳನ್ನು ಬಲಿ ತೆಗೆದುಕೊಂಡರು.

ಸೂರ್ಯ ಕುಮಾರ್ ಹೆಚ್ಚು ಹೊತ್ತು ನಿಲ್ಲದೇ ನಾಸೀಮ್ ಶಾಗೆ ವಿಕೆಟ್ ಒಪ್ಪಿಸಿದರು.89 ರನ್‍ಗಳಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರವೀಂದ್ರ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಒಳ್ಳೆಯ ಸಾಥ್ ಕೊಟ್ರು. ಎಚ್ಚರಿಕೆಯ ಆಟವಾಡಿದ ಈ ಜೋಡಿ  ಪಾಕ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿತು.

ಕೊನೆಯಲ್ಲಿ  ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಹಾರ್ದಿಕ್ ಪಾಂಡ್ಯ ಬೌಂಡರಿಗಳನ್ನು ಸಿಡಿಸಿದರೇ. ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 35 ರನ್ ಗಳಿಸಿ ಮೊಹ್ಮದ್ ನವಾಜ್‍ಗೆ ವಿಕೆಟ್ ಒಪ್ಪಿಸಿದರು.  ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ತಂಡ  ವೇಗಿ ಭುವನಶ್ವರ್ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್ ಅಜಂ (10 ರನ್) ಭುವನಶ್ವರ್ ಗೆ ವಿಕೆಟ್ ಒಪ್ಪಿಸಿದರು.ಆಕರ್ ಜಮಾನ್ (10 ರನ್) ಆವೇಶ್ ಖಾನ್ ಎಸೆತದಲ್ಲಿ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿದರು.

42 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದಾಗ ನಾಲ್ಕನೆ ಕ್ರಮಾಂಕದಲ್ಲಿ ಬಂದ ಇಫ್ತಿಖಾರ್ ಅಹಮದ್, ಮೊಹ್ಮದ್ ರಿಜ್ವಾನ್‍ಗೆ ಸಾಥ್ ನೀಡಿದರು. ಈ ಜೋಡಿ 45 ರನ್‍ಗಳ ಜೊತೆಯಾಟ ನೀಡಿದರು.  ಈ ವೇಳೆ ದಾಳಿಗಿಳಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇಫ್ತಿಕಾರ್ ಅಹಮದ್ (28 ರನ್),ಮೊಹ್ಮದ್ ರಿಜ್ವಾನ್ (43 ರನ್ )ಮತ್ತು ಖುಷ್‍ದಿಲ್‍ಶಾ (2ರನ್) ಅವರುಗಳನ್ನು ಬಲಿ ತೆಗೆದುಕೊಂಡರು.

ನಂತರ ಬಂದ ಯಾವ ಬ್ಯಾಟರ್‍ಗಳು ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲಘಿ. ಖುಶ್‍ದಿಲ್ ಶಾ 2, ಶಾದಾಬ್ ಖಾನ್ 10, ಅಸೀï ಅಲಿ 9, ಮೊಹ್ಮದ್ ನವಾಜ್ 1, ಹ್ಯಾರಿಸ್ ರೌï ಅಜೇಯ 13, ನಸೀಮ್ ಶಾ 0, ಶಾಹನಾವಾಜ್ ದಾಹಾನಿ ಅಜೇಯ 16 ರನ್ ಗಳಿಸಿದರು.  ಭಾರತ ಪರ ಭುವನೇಶ್ವರ್ ಕುಮಾರ್ 26ಕ್ಕೆ 4, ಹಾರ್ದಿಕ್ 25ಕ್ಕೆ3, ಆರ್ಷದೀಪ್ 33ಕ್ಕೆ 2, ಆವೇಶ್ ಖಾನ್ 19ಕ್ಕೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ 

ಪಾಕಿಸ್ಥಾನ  147 ಆಲೌಟ್  (19.5 ಓವರ್) 

ಮೊಹ್ಮದ್ ರಿಜ್ವಾನ್ 43, ಇಫ್ತಿಖಾರ್ ಅಹಮ್ದ್ 28 

ಭುವನೇಶ್ವರ್ ಕುಮಾರ್ 26ಕ್ಕೆ 4, ಹಾರ್ದಿಕ್ 25ಕ್ಕೆ 3

ಭಾರತ 148/5 (19.4 ಓವರ್)

ರವೀಂದ್ರ ಜಡೇಜಾ 35, ಹಾರ್ದಿಕ್ ಅಜೇಯ 33

 

 

ಮೊಹ್ಮದ ನವಾಜ್ 33ಕ್ಕೆ 3, ನಸೀಮ 27ಕ್ಕೆ 2

- Advertisement -

Latest Posts

Don't Miss