Thursday, May 30, 2024

Latest Posts

ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು

- Advertisement -

ದುಬೈ: ಮಾಜಿ ನಾಯಕ ವಿರಾಟ್ ಕೊಹ್ಲಿ  ಪಾಕ್ ವಿರುದ್ಧ ಆಡುವ ಮೂಲಕ ಹೊಸ ಮೈಲಿಗಲ್ಲು ಮುಟ್ಟಿದ ಹಿರಿಮೆಗೆ ಪಾತ್ರರಾದರು. ಪಾಕ್ ವಿರುದ್ಧ ಆಡುವ ಮೂಲಕ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದರು.

ಈ ಮೂಲಕ ಮೂರು ಮಾದರಿಯಲ್ಲಿ  100 ಪಂದ್ಯಗಳನ್ನು ಪೂರೈಸಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ಎರಡನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ನ್ಯೂಜಿಲೆಂಡ್‍ನ ತಂಡದ ಮಾಜಿ ನಾಯಕ ರಾಸ್ ಟೇಲರ್ 3 ಮಾದರಿಯ ಕ್ರಿಕೆಟ್‍ನಲ್ಲಿ  ನೂರು ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ ತಂಡ ಆರಂಭಿಕ ಆಘಾತ ಅನುಭವಿಸಿದ್ದಾಗ ನಾಯಕ ರೋಹಿತ್ ಜೊತೆಗೂಡಿ 49 ರನ್ ಗಳ ಜೊತೆಯಾಟ ನೀಡಿ ತಂಡದ ಕುಸಿತವನ್ನು ತಡೆದರು.

ವಿರಾಟ್ 34 ಎಸೆತದಲ್ಲಿ 3 ಬೌಂಡರಿ 1 ಸಿಕ್ಸರ್ ಸಿಡಿಸಿ 35 ರನ್ ಗಳಿಸಿದರು. ಭಾರತ 5 ವಿಕೆಟ್ ಗಳ ಅಂತರದಿಂದ ಗೆದ್ದು ರೋಚಕ ಗೆಲುವು ಪಡೆದು ವಿರಾಟ್ ಗೆ ಗೆಲುವಿನ ಉಡುಗೊರೆ ನೀಡಿತು.

ಸಂಕ್ಷಿಪ್ತ ಸ್ಕೋರ್ 

ಪಾಕಿಸ್ಥಾನ  147 ಆಲೌಟ್  (19.5 ಓವರ್) 

ಮೊಹ್ಮದ್ ರಿಜ್ವಾನ್ 43, ಇಫ್ತಿಖಾರ್ ಅಹಮ್ದ್ 28 

ಭುವನೇಶ್ವರ್ ಕುಮಾರ್ 26ಕ್ಕೆ 4, ಹಾರ್ದಿಕ್ 25ಕ್ಕೆ 3

ಭಾರತ 148/5 (19.4 ಓವರ್)

ರವೀಂದ್ರ ಜಡೇಜಾ 35, ಹಾರ್ದಿಕ್ ಅಜೇಯ 33

ಮೊಹ್ಮದ ನವಾಜ್ 33ಕ್ಕೆ 3, ನಸೀಮ 27ಕ್ಕೆ 2

 

 

- Advertisement -

Latest Posts

Don't Miss