Saturday, July 27, 2024

Latest Posts

ಹಾಲು ಉತ್ಪಾದಕರ ಸಬ್ಸಿಡಿ ಹಣ ಬಾಕಿ ಉಳಿಸಿಕೊಂಡಿರುವ ಸರಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ?: ಕುಮಾರಸ್ವಾಮಿ

- Advertisement -

Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಹಾಲಿನ ಸಬ್ಸಿಡಿ ಕೊಡದಿದ್ದ ಕಾರಣಕ್ಕೆ, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಬರದಿಂದ ಕಂಗೆಟ್ಟ ರೈತರ ಹಾಹಾಕಾರ ಒಂದೆಡೆಯಾದರೆ, ಹಾಲಿನ ಸಬ್ಸಿಡಿಯನ್ನೂ ಕೊಡದೇ ದೋಖಾ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ. ಹಾಲು ಉತ್ಪಾದಕರ ಸಬ್ಸಿಡಿ ಹಣ ₹700 ಕೋಟಿ ಬಾಕಿ ಉಳಿಸಿಕೊಂಡಿರುವ ಸರಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೃಷಿ ಅನುದಾನಕ್ಕೆ 32% ಕತ್ತರಿ ಹಾಕಿದ್ದಾಯಿತು. ಈಗ ಹೈನುಗಾರರ ಸಬ್ಸಿಡಿಗೂ ಪಂಗನಾಮ. ಒಂದು ಲೀಟರ್ ಹಾಲಿನ ಸಬ್ಸಿಡಿಯನ್ನು ₹7 ಹೆಚ್ಚಿಸುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಸುಳ್ಳು ಹೇಳಿದ್ದೇ ಹೇಳಿದ್ದು. ಹೆಚ್ಚಿಸುವ ಮಾತಿರಲಿ, ಇದ್ದ ಸಬ್ಸಿಡಿಯನ್ನೂ (ಲೀಟರ್ ಹಾಲಿಗೆ ₹5) ಕೊಡದೇ 7 ತಿಂಗಳಿಂದ ಸತಾಯಿಸುತ್ತಿದೆ. ಗೋವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವೂ ಸಿಗುತ್ತಿಲ್ಲ. ಇಂಥ ಕಡು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಕೂಡಲೇ ರಾಜ್ಯ ಸರಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ: ಡಿ.ಕೆ.ಶಿವಕುಮಾರ್

ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ: ಸಿಎಂ

ರಾಮಮಂದಿರಕ್ಕೆ ನಾವೂ ಇಟ್ಟಿಗೆ ಕೊಟ್ಟಿದ್ದೀವಿ, ಆದ್ರೆ ಬಿಜೆಪಿಯವರು ಧರ್ಮಗಳ ಮಧ್ಯೆ ತಂದಿಡುತ್ತಿದ್ದಾರೆ: ನಟ ವಿಜಿ

- Advertisement -

Latest Posts

Don't Miss