Hassan News: ಹಾಸನ: ನಿನ್ನೆ ಹಾಸನದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಪುಂಡರು, ಇಬ್ಬರು ಯುವತಿಯರು ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಆ ವಾಹನದಲ್ಲಿದ್ದ ಯುವತಿಯರಿಗೆ ಗಂಭೀರ ಗಾಯವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವ್ಹೀಲಿಂಗ್ ಮಾಡಿದ್ದ ಪುಂಡರು ಪೊಲೀಸರ ಅತಿಥಿಯಾಗಿದ್ದಾರೆ. ಇಂಥ ಘಟನೆಗಳಿಂದ ಹಾಸನದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ಕಾರಣಕ್ಕೆ ಇಂದು ಹಾಸನದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ತಡೆಯಲು ಪೊಲೀಸರು ಬೀದಿಗಿಳಿದಿದ್ದರು. ಜೊತೆಗೆ ಟ್ರಾಫಿಕ್ ಕಿರಿಕಿರಿಯೂ ಹೆಚ್ಚಾದ ಕಾರಣ, ಕುಡಿದು ಗಾಡಿ ಓಡಿಸುವ, ಹೆಲ್ಮೆಟ್, ಲೈಸೆನ್ಸ್ ಇಲ್ಲದೇ ವಾಹನ ಓಡಿಸುವವರನ್ನ ನಿಲ್ಲಿಸಿ, ದಂಡ ಹಾಕಿದ್ದಾರೆ.
ಪೊಲೀಸ್ ವರಿಷ್ಟಅಧಿಕಾರಿ ಹರಿರಾಮ್ ಶಂಕರ್ ಆದೇಶದ ಮೇರೆಗೆ, ಡಿವೈಎಸ್ಪಿ ಉದಯ್ ಭಾಸ್ಕರ್ ಹಾಗೂ ಬಡಾವಣೆ ಇನ್ಸ್ಪೆಕ್ಟರ್ ಸ್ವಾಮಿನಾಥ್, ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಕಾಶ್ ನೇತೃತ್ವದಲ್ಲಿ, ಎಂಜಿ ರೋಡ್ ಫುಡ್ ಕೋರ್ಟ್ ಹತ್ತಿರ ಸುಮಾರು 43 ವಾಹನಗಳಿಗೆ ಹೆಲ್ಮೆಟ್ ಕೇಸ್ ಹಾಗೂ ಕುಡಿದು ವಾಹನ ಚಲಾಯಿಸುತ್ತಿರುವವರಿಗೆ ದಂಡ ಹಾಕಿದ್ದಾರೆ.
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ
ಚುನಾವಣೆಯಲ್ಲಿ ಸೋತರೂ, ಕೊಟ್ಟ ಮಾತು ಉಳಿಸಿಕೊಂಡ ಮದ್ದೂರು ಬಿಜೆಪಿ ಅಭ್ಯರ್ಥಿ