Political News: ಕೃಷ್ಣಭೈರೇಗೌಡ ಅವರು ಹಲವು ದಿನಗಳ ನಂತರ ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ನನಗೆ ಈ ಖಾತೆ ಬೇಡವೆಂದು ಇದೀಗ, ಆಡಳಿತ ಶುರು ಮಾಡಿದ್ದರ ಬಗ್ಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೃಷ್ಣಭೈರೇಗೌಡ ಅವರಿಗೆ ಅಭಿನಂದನೆಗಳು!, ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ! ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.
ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ ‘ನಗರಾಭಿವೃದ್ಧಿ’ ಅಂತ ಹೆಸರೇನೋ ಇದೆ, ಆದ್ರೆ ಟೌನ್ ಪ್ಲಾನಿಂಗ್ ಸಂಸ್ಥೆಗಳಾದ BDA ಮತ್ತು BMRDA ಮಾತ್ರ ಮುಖ್ಯಮಂತ್ರಿಗಳ ಬಳಿಯೇ ಇವೆ! ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿ ಮಾಡುವುದು ನಿಜಕ್ಕೂ ದೊಡ್ಡ ಸವಾಲೇ ಸರಿ.
ಆದ್ರೆ ನಿಮ್ಮ ಹಳೇ ಟ್ರ್ಯಾಕ್ ರೆಕಾರ್ಡ್ ನಮಗೆ ಗೊತ್ತು. ಹಿಂದೆ ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಬಳಸಿ ನೀವು ತಂದ ವ್ಯವಸ್ಥಿತ ಸುಧಾರಣೆಗಳು ಜನರ ಮನಸ್ಸಿನಲ್ಲಿದೆ. ಎಷ್ಟೇ ಗೊಂದಲಮಯ ವ್ಯವಸ್ಥೆ ಇದ್ದರೂ ಅದನ್ನು ಸರಿಪಡಿಸುವ ಸಾಮರ್ಥ್ಯ ನಿಮಗಿದೆ ಎಂದು ಕೃಷ್ಣಭೈರೇಗೌಡರ ಕೆಲಸವನ್ನು ನಿಖಿಲ್ ಶ್ಲಾಘಿಸಿದ್ದಾರೆ..
ಸದ್ಯಕ್ಕೆ ನಿಮ್ಮ ಮುಖ್ಯ ಜವಾಬ್ದಾರಿ ಬೆಂಗಳೂರಿನ ‘ತ್ರಿಮೂರ್ತಿ’ ಸಮಸ್ಯೆಗಳ ಮೇಲೆ ನಿಂತಿದೆ: ಕಸ (Garbage), ಒಳಚರಂಡಿ (Sewage) ಮತ್ತು ರಾಜಕಾಲುವೆ (Drainage). ಈಗಷ್ಟೇ ಮುಂಗಾರು ಶುರುವಾಗಿರೋದ್ರಿಂದ ಬೆಂಗಳೂರಿಗರಿಗೆ ಈಗ ದೊಡ್ಡ ದೊಡ್ಡ ಸ್ಕೈವಾಕ್‌ಗಳು ಬೇಡ; ಮಳೆ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ಹಾಗೂ ಸ್ವಚ್ಛ ರಸ್ತೆಗಳು ಬೇಕು. ಈ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು, ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು. ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಮಿನಿಸ್ಟರ್ ಸರ್! ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ @krishnabgowda ಅವರಿಗೆ ಅಭಿನಂದನೆಗಳು!, ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ!
ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ 'ನಗರಾಭಿವೃದ್ಧಿ' ಅಂತ ಹೆಸರೇನೋ ಇದೆ, ಆದ್ರೆ ಟೌನ್… https://t.co/sbYVx3cFkw
— Nikhil Kumar (@Nikhil_Kumar_k) June 17, 2026




