- Advertisement -
2022-23 ನೇ ಸಾಲಿನ ಕೇಂದ್ರ ಬಜೆಟ್(Central budget) ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಮಂಡಿಸಿದರು. ಒಟ್ಟಾರೆಯಾಗಿ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ನಂತರ ಕೇಂದ್ರದ ಬಜೆಟ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ(Ex CM Kumaraswamy) ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಬಜೆಟ್ ಬಗ್ಗೆ ಕಿಡಿಕಾರಿದ್ದಾರೆ. ಜನರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್ ಎಂದು ಕಿಡಿಕಾರಿದ್ದಾರೆ. ಕೆಲವು ನೀರಾವರಿ ಯೋಜನೆಯ ಪ್ರಸ್ತಾವನೆ ಯಾಗಿದೆ. ಕಾವೇರಿ,ಪೆನ್ನಾರ್, ಕೃಷ್ಣ, ಗೋದಾವರಿ ನದಿಗಳ ಜೋಡಣೆ ಬಗ್ಗೆ ಕಳೆದ 3 ವರ್ಷದಿಂದಲೂ ಪ್ರಸ್ತಾವನೆ ಇದೆ, ಆದರೆ ಕಾರ್ಯಗತಗೊಳಿಸಲು ಹಾಗಿಲ್ಲ ಇದೇನು ಹೊಸ ರೀತಿಯ ವಿಚಾರ ಅಲ್ಲ ಎಂದು ಕೇಂದ್ರ ಬಜೆಟ್ ನ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
- Advertisement -