Thursday, February 6, 2025

Latest Posts

ಬ್ಯಾಂಕ್ ಹಾಲಿಡೇ ಇದ್ದಾಗಷ್ಟೇ ಟ್ವೀಟ್ ಮಾಡ್ತಾರಪ್ಪಾ: RCBಗೆ ವಿಶ್ ಮಾಡಲು ಹೋಗಿ ಟ್ರೋಲ್ ಆದ ಮಲ್ಯ

- Advertisement -

Sports News: ಭರ್ಜರಿ ಸಾಲ ಮಾಡಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ಈ ಮೊದಲು ಆರ್‌ಸಿಬಿ ತಂಡದ ಓನರ್ ಆಗಿದ್ದವರು. ಇದೀಗ ಆರ್‌ಸಿಬಿ ಮಹಿಳಾ ತಂಡ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಅಭಿನಂದನೆ ಕೋರಿ, ಟ್ವೀಟ್ ಮಾಡಿದ್ದಾರೆ.

ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಮಹಿಳಾ ತಂಡಕ್‌ಕೆ ಅಭಿನಂದನೆಗಳು. ಇದೇ ರೀತಿ ಈ ಬಾರಿ ಐಪಿಎಲ್‌ನಲ್ಲಿ ಪುರುಷರ ತಂಡವೂ ಟ್ರೋಫಿ ಗೆದ್ದರೆ, ಈ ಖುಷಿ ಇಮ್ಮಡಿಯಾಗುತ್ತದೆ ಅಂತಾ ಮಲ್ಯ ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ತರಹೇವಾರಿ ಕಾಮೆಂಟ್ಸ್ ಬಂದಿದ್ದು, ಬರೀ ಬ್ಯಾಂಕ್ ಹಾಲಿಡೇ ಇದ್ದಾಗ ಮಾತ್ರ ಮಲ್ಯ ಟ್ವೀಟ್ ಮಾಡ್ತಾರೆ ಅಂತಾ ಓರ್ವ ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ಇದೇ ಖುಷಿಗೆ ಭಾರತಕ್ಕೆ ಬಂದುಬಿಡಿ. ಖುಷಿಯನ್ನು ಸೆಲೆಬ್ರೇಟ್ ಮಾಡೋಣ ಎಂದಿದ್ದಾರೆ. ಮತ್ತೆ ಕೆಲವರು ಕಿಂಗ್ ಫಿಷರ್ ಏರ್‌ಲೈನ್ಸ್ ಮಾಜಿ ನೌಕರರು ಇನ್ನೂ ಕೂಡ ಸ್ಯಾಲರಿಗಾಗಿ ಕಾಯುತ್ತಿದ್ದಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

- Advertisement -

Latest Posts

Don't Miss