ಸ್ವೀಟ್ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಅಮೇರಿಕನ್ ಸ್ವೀಟ್ ಕಾರ್ನ್ ಬೇಯಿಸಿ ತಿಂದ್ರೆ, ರುಚಿಯೂ ಇರತ್ತೆ, ಆರೋಗ್ಯಕ್ಕೂ ಒಳ್ಳೆಯದು. ಸಲಾಡ್‌ಗೂ ಕೂಡ ಅಮೇರಿಕನ್ ಸ್ವೀಟ್ ಕಾರ್ನ್ ಬಳಸುತ್ತಾರೆ. ಹಸಿಯಾಗಿ ಸ್ವೀಟ್ ಕಾರ್ನ್ ತಿಂದ್ರೂ ಒಳ್ಳೆಯದೇ. ಆದ್ರೆ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರ್ದು ಅಷ್ಟೆ. ಇನ್ನು ಅಮೆರಿಕನ್ ಸ್ವೀಟ್ ಕಾರ್ನ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸಿನಿಮಾ, ಶಾಪಿಂಗ್, ದೇವಸ್ಥಾನ, ಮಾರ್ಕೆಟ್ ಎಲ್ಲಿ ಹೋದರೂ ನಿಮಗೆ ಆರಾಮವಾಗಿ ಸಿಗುವ ಹೆಲ್ದಿ ಸ್ನ್ಯಾಕ್ಸ್ ಅಂದ್ರೆ ಸ್ವೀಟ್ ಕಾರ್ನ್. ಸಾಫ್ಟ್ ಆದ ಬೇಯಿಸಿದ ಸ್ವೀಟ್ ಕಾರ್ನ್‌ಗೆ ಸ್ವಲ್ಪ, ಉಪ್ಪು, ಹುಳಿ, ಖಾರ, ಸಿಹಿ ಸೇರಿಸಿ ಸವಿದರೆ, ಸಖತ್ ಟೇಸ್ಟಿಯಾಗಿರತ್ತೆ. ಇಂಥ ರುಚಿಕರ ಸ್ನ್ಯಾಕ್ಸ್ ಆರೋಗ್ಯಕ್ಕೂ ಒಳ್ಳೆಯದು. ಸ್ವೀಟ್ ಕಾರ್ನ್ ನಿಯಮಿತವಾಗಿ ಲಿಮಿಟ್‌ನಲ್ಲಿ ಸೇವಿಸುವುದರಿಂದ ಸೌಂದರ್ಯ ವರ್ಧನೆಯಾಗುತ್ತದೆ. ನೀವು ಸ್ವೀಟ್ ಕಾರ್ನ್‌ನಿಂದ ಮಾಡಿದ ಸೂಪ್ ಕೂಡ ಸೇವಿಸಬಹುದು.
ಇನ್ನು ನಿಮ್ಮ ಶರೀರದಲ್ಲಿ ವಿಟಾಮಿನ್ ಕೊರತೆ ಇದ್ದಲ್ಲಿ, ಸ್ವೀಟ್ ಕಾರ್ನನ್ನ ಖಂಡಿತ ಸೇವಿಸಿ. ಇದರಿಂದ ದೇಹದಲ್ಲಿ ಶಕ್ತಿಯೂ ಬರುತ್ತದೆ. ಸ್ವೀಟ್ ಕಾರ್ನ್ ಬೇಯಿಸಿ, ಕೊಂಚ ಕೊಂಚವೇ ಉಪ್ಪು ಮತ್ತು ತುಪ್ಪ ಸೇರಿಸಿ, ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುತ್ತದೆ. ಆದ್ರೆ ನೀವು ಸ್ವೀಟ್ ಕಾರ್ನ್ ರುಚಿಯಾಗಲೆಂದು ಹೆಚ್ಚೆಚ್ಚು ಉಪ್ಪು, ಖಾರ, ಹುಳಿ, ಸಿಹಿ, ಬೆಣ್ಣೆ, ಎಣ್ಣೆಯನ್ನೆಲ್ಲ ಬಳಸಿದ್ರೆ ಅದರಿಂದ ಆರೋಗ್ಯಕ್ಕೇನು ಲಾಭವಾಗೋದಿಲ್ಲಾ. ಬದಲಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
ಅಮೆರಿಕನ್ ಸ್ವೀಟ್ ಕಾರ್ನ್ ಸಾಫ್ಟ್ ಆಗಿದ್ದ ಕಾರಣ, ಆರಾಮಾಗಿ ಜೀರ್ಣವಾಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಇದ್ದಲ್ಲಿ, ಅದಕ್ಕೂ ಪರಿಹಾರ ಸಿಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಅದಕ್ಕೂ ಪರಿಹಾರ ಕಂಡುಕೊಳ್ಳಬಹುದು. ಇನ್ನು ನಿಮಗೆ ಸ್ವೀಟ್ ಕಾರ್ನ್ ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.

