ಬ್ರೊಕೋಲಿ ಎಂಬ ಹಸಿರು ಹೂಕೋಸು ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೊಂಚ ಹೆಚ್ಚು ಬೆಲೆಯದ್ದೇ ಆಗಿರುವ ಈ ತರಕಾರಿಯನ್ನ ಶ್ರೀಮಮಂತರೇ ಹೆಚ್ಚಾಗಿ ಸೇವಿಸೋದು. ಆದ್ರೆ ಈ ತರಕಾರಿ ತಿಂದ್ರೆ ಆರೋಗ್ಯಕ್ಕೆ ಏನು ಲಾಭ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ವಿದೇಶದಲ್ಲಿ ಬ್ರೊಕೋಲಿಯನ್ನ ಹೆಚ್ಚಾಗಿ ಬಳಸಲಾಗತ್ತೆ. ಸಲಾಡ್, ಪಾಸ್ತಾ ಮಾಡುವಾಗ ಬ್ರೊಕೋಲಿ ಬಳಸುತ್ತಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿರುವವರು ಬ್ರೊಕೋಲಿಯನ್ನ ಬಳಸಬಹುದು. ಹೃದಯ ಸಮಸ್ಯೆನ್ನು ನಿಯಂತ್ರಿಸುವ ಗುಣ ಇದರಲ್ಲಿದ್ದು, ನೀವು ಆರೋಗ್ಯವಾಗಿರಲು ಇದು ಸಹಾಯ ಮಾಡುತ್ತದೆ. ಬ್ರೋಕೋಲಿಯನ್ನು ಕೊಂಚ ಬೇಯಿಸಿ, ಸಲಾಡ್ ರೀತಿ ಸೇವಿಸಿ. ಹೀಗೆ ಸೇವಿಸುವಾಗ ಅದಕ್ಕೆ ಆಲಿವ್ ಎಣ್ಣೆ ಬಳಸಿ.
ಬ್ರೊಕೊಲಿಯಲ್ಲಿ ಆ್ಯಂಟಿ ಕ್ಯಾನ್ಸರಸ್ ಪ್ರಾಪರ್ಟಿ ಇರುವುದರಿಂದ, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಬ್ರೊಕೊಲಿ ಸೇವನೆಯಿಂದ ನಾವು ಕ್ಯಾನ್ಸರ್ ಬರುವುದನ್ನು ತಡೆಯಬಹುದು. ನೀವು ಬ್ರೊಕೋಲಿಯ ಸೂಪ್ ಮಾಡಿ ಸೇವಿಸಬಹುದು. ಪಾಸ್ತಾ ಮಾಡುವಾಗ ಬ್ರೊಕೋಲಿ ಬಳಸಿ ನೋಡಿ. ಆದ್ರೆ ನೀವು ಬ್ರೊಕೊಲಿಯಿಂದ ಯಾವುದೇ ಪದಾರ್ಥ ತಯಾರಿಸಿದರೂ, ಅದಕ್ಕೆ ಹೆಚ್ಚು ಎಣ್ಣೆ, ಉಪ್ಪು, ಖಾರ ಮತ್ತು ನೀರು ಬಳಸಬಾರದು. ಎಣ್ಣೆ, ಉಪ್ಪು, ಖಾರ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮತ್ತು ಹೆಚ್ಚು ನೀರು ಹಾಕಿ ಬ್ರೊಕೊಲಿಯನ್ನ ಬೇಯಿಸಿ ತಿಂದ್ರೆ ಏನೂ ಪ್ರಯೋಜನವಾಗುವುದಿಲ್ಲ.
ಇಂದಿನ ಯುವ ಪೀಳಿಗೆಯಲ್ಲಿ ಡಿಪ್ರೆಶನ್ ಅನ್ನೋದು ಸಾಮಾನ್ಯವಾಗಿದೆ. ಪ್ರತಿ ವಿಷಯಕ್ಕೂ ಡಿಪ್ರೆಶನ್ಗೆ ಹೋಗುವ ಜನರಿದ್ದಾರೆ. ಇಂಥವರಿಗೆ ಬ್ರೊಕೊಲಿ ತವ್ವಾ ಫ್ರೈ ಮಾಡಿ ಕೊಡಿ. ಯಾಕಂದ್ರೆ ಬ್ರೊಕೊಲಿಯಲ್ಲಿ ಡಿಪ್ರೆಶನ್ ಕಂಟ್ರೋಲ್ ಮಾಡುವ ಗುಣವಿದೆ. ಅಲ್ಲದೇ ಬ್ರೊಕೊಲಿ ಸೇವಿಸಿದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಪ್ರೋಟಿನ್ ಅಂಶವಿದ್ದು, ನೀವು ವೆಜಿಟೇರಿಯನ್ ಆಗಿದ್ದಲ್ಲಿ ಬ್ರೊಕೊಲಿ ಬಳಸಿ. ಯಾಕಂದ್ರೆ ನಾನ್ವೆಜ್ ತಿನ್ನುವವರು ಪ್ರೊಟೀನ್ನಿಂದ ಭರಪೂರರಾಗಿರುತ್ತಾರೆ. ಹಾಗಾಗಿ ನೀವು ಜಿಮ್ ಮಾಡುತ್ತಿದ್ದಲ್ಲಿ, ಬಾಡಿ ಬೆಳೆಸಬೇಕು ಆದ್ರೆ ನಾನ್ವೆಜ್ ತಿನ್ನುವುದಿಲ್ಲ ಎಂದಲ್ಲಿ ಬ್ರೊಕೊಲಿ ಬಳಸಿ. ಇನ್ನು ನಿಮಗೆ ಬ್ರೊಕೊಲಿ ತಿಂದ್ರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬ್ರೊಕೊಲಿ ಸೇವಿಸುವುದು ಉತ್ತಮ.