ಹಲಸಿನ ಹಣ್ಣು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ..

ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ ಗಿಡಗಳು, ಹಲಸಿನ ಖಾದ್ಯಗಳು ಇತ್ಯಾದಿ ನಮಗೆ ಕಾಣ ಸಿಗುತ್ತದೆ. ಇಂಥ ಗುಣಗಳ ಹಲಸಿನ ಹಣ್ಣನ್ನ ನಾವು ತಿಂದ್ರೆ ನಮಗೆ ಎಂತಹ ಅತ್ಯುತ್ತಮ ಲಾಭಗಳಾಗತ್ತೆ ಅಂತಾ ಗೊತ್ತಾ ನಿಮಗೆ. ಗೊತ್ತಿಲ್ಲದಿದ್ರೆ ಈಗಲೇ ತಿಳಿದುಕೊಳ್ಳಿ..

ಹಲಸಿನ ಹಣ್ಣಿನಲ್ಲಿ ಹೆಚ್ಚಿನಂಶ ಪೊಟ್ಯಾಶಿಯಂ ಇರುತ್ತದೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಈ ಹಣ್ಣಿನ ಸೇವನೆ ತುಂಬಾ ಸಹಕಾರಿ. ನಿಮಗೆ ಹೀಗೆ ಹಲಸಿನ ಹಣ್ಣು ತಿನ್ನೋಕ್ಕೆ ಇಷ್ಟವಿಲ್ಲದಿದ್ರೆ, ಅದರ ಪಲ್ಯ ಸಾರು ಮಾಡಿ ತಿನ್ನಿ. ಆದ್ರೆ ಆ ಪಲ್ಯ ಮತ್ತು ಸಾರಿಗೆ ಹೆಚ್ಚು ಉಪ್ಪು ಖಾರ ಸೇರಿಸುವಂತಿಲ್ಲ. ಆ ಪದಾರ್ಥ ಆರೋಗ್ಯಕರವಾಗಿರಬೇಕಷ್ಟೆ. ಹಲಸಿನ ಕಾಯಿಯಿಂದ ಮಾಡುವ ಚಿಪ್ಸ್ ಎಲ್ಲರಿಗೂ ಇಷ್ಟಾ ಆಗಬಹುದು. ಆದ್ರೆ ಅದು ಹೆಚ್ಚು ತಿನ್ನಕೂಡದು. ಅದನ್ನು ತೆಂಗಿನ ಎಣ್ಣೆಯಲ್ಲಿ ಕರೆದರೆ, ಕೊಂಚ ತಿನ್ನಬಹುದು. ಆದ್ರೆ ಪೇಟೆಯಲ್ಲಿ ಸಿಗುವ ಎಣ್ಣೆಯಲ್ಲಿ ಕರಿದರೆ, ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದರಲ್ಲಿ ಎಲ್ಲ ಹಣ್ಣುಗಳಿಗಿಂತ ಹೆಚ್ಚು ಐರನ್ ಕಂಟೆಂಟ್ ಇರುತ್ತದೆ. ದೇಹದಲ್ಲಿ ರಕ್ತ ಕಡಿಮೆ ಇದ್ದರೆ, ಹಿಮೋಗ್ಲೋಬಿನ್ ಸಮಮ ಪ್ರಮಾಣದಲ್ಲಿ ಇಲ್ಲವಾಗಿದ್ದಲ್ಲಿ ನೀವು ಹಲಸಿನ ಹಣ್ಣು ಅಥವಾ ಕಾಯಿಯಿಂದ ಮಾಡಿದ ಪದಾರ್ಥವನ್ನು ತಿನ್ನಬೇಕು. ಇನ್ನು ಹಲಸಿನ ಕಾಯಿಯಿಂದ ಮಾಡಿದ ಪದಾರ್ಥ ತಿಂದ್ರೆ ಕೆಲವರಿಗೆ ಅಲರ್ಜಿಯಾಗುತ್ತದೆ. ಹೊಟ್ಟೆ ನೋವುತ್ತದೆ. ಅವರು ಆ ಪದಾರ್ಥಕ್ಕೆ ಕೊಂಚ ಇಂಗು ಹಾಕಿ, ಪದಾರ್ಥ ತಯಾರಿಸಿ.

ಅಸ್ತಮಾ ರೋಗಿಗಳು ಹಲಸಿನ ಹಣ್ಣು ಸೇವನೆ ಮಾಡಿದ್ರೆ ಅತೀ ಉತ್ತಮ. ಇನ್ನು ನೀವೇನಾದ್ರೂ ತೂಕ ಇಳಿಸೋಕ್‌ಕೆ ಪ್ರಯತ್ನ ಮಾಡುತ್ತಿದ್ರೆ, ಹಲಸಿನ ಹಣ್ಣಿನ ಸೇವನೆ ಮಾಡಬೇಕು. ಇದನ್ನ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಗೆ ಕೂಡ ಪರಿಹಾರ ಸಿಗುತ್ತದೆ.

About The Author