Health Tips: ನಾವೆಲ್ಲ ಆರೋಗ್ಯ ಸಮಸ್ಯೆ ಬರುವವರೆಗೂ ಅದೆಷ್ಟು ಹಾಯಾಗಿರುತ್ತೇವೆ. ಆದರೆ ಒಮ್ಮೆ ಆರೋಗ್ಯ ಸಮಸ್ಯೆ ಒಕ್ಕರಿಸಿದರೆ, ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿತ್ತು ಎಂಬ ಪಶ್ಚಾತಾಪ ಆಗುತ್ತದೆ. ಅದೇ ರೀತಿ ನೀವು ಪ್ರತಿದಿನ ಎಷ್ಟು ಬಾರಿ ಮೂತ್ರ ವಿಸರ್ಜಿಸುತ್ತಿದ್ದೀರಿ..? ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆಯೋ ಇಲ್ಲವೋ..? ಮಲ ವಿಸರ್ಜನೆ ಸರಿಯಾಗಿ ಆಗುತ್ತಿದೆಯೋ, ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬೇಕು. ಇದರಲ್ಲೇನಾದರೂ ಸಮಸ್ಯೆ ಇದ್ದಲ್ಲಿ, ತಕ್ಷಣ ವೈದ್ಯರ ಬಳಿ ಈ ಬಗ್ಗೆ ಚಿಕಿತ್ಸೆ ಪಡೆಯಬೇಕು. ಏಕೆಂದರೆ, ಇದು ಹರ್ನಿಯಾ ಎಂಬ ರೋಗ ಇದ್ದರೂ ಇರಬಹುದು. ಹಾಗಾಗಿ ಡಾ.ಅರ್ಜುನ್ ಅವರು ಇಂದು ಹರ್ನಿಯಾ ಬಗ್ಗೆ ವಿವರಣೆ ನೀಡಿದ್ದಾರೆ.
ನಮ್ಮ ಕರುಳಿನಲ್ಲಿರುವ ಭಾಗ ಹೊರಗೆ ಬರಲು ಪ್ರಯತ್ನಿಸುತ್ತಿರುತ್ತದೆ. ಹಾಗೆ ಕರುಳಿನಿಂದ ಭಾಗ ಹೊರ ಬರುವುದನ್ನೇ ಹರ್ನಿಯಾ ಎಂದು ಕರೆಯಲಾಗುತ್ತದೆ. ಹರ್ನಿಯಾ ಬಂದರೆ, ನಾವು ಸರಿಯಾಗಿ ಮೂತ್ರ ವಿಸರ್ಜಿಸಲು ಸಾಧ್ಯವಾಗುವುದು, ಮಲ ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತದೆ. ಹಾಗಾಗಿ ಮಲ ಮೂತ್ರ ವಿಸರ್ಜನೆ ಮಾಡಲು ಕಷ್ಟವಾದರೆ, ಅಥವಾ ಆಗುತ್ತಲೇ ಇಲ್ಲ ಎಂದಲ್ಲಿ, ಈ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆಯುವುದು ಉತ್ತಮ.
ಅಲ್ಲದೇ, ಮೂತ್ರ, ಮಲ ವಿಸರ್ಜಿಸುವಾಗ ಹೆಚ್ಚು ಭಾರ ಹಾಕಬಾರದು. ಚೆನ್ನಾಗಿ ನೀರಿನ ಸೇವನೆ ಮಾಡಿದ್ದಲ್ಲಿ, ಮಲ ಮೂರ್ತ ವಿಸರ್ಜನೆಗೆ ಯಾವುದೇ ತೊಂದರೆಯಾಗುವುದಿಲ್ಲ. ಹರ್ನಿಯಾ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.