Web Story: ಸ್ಪ್ರಿಂಗ್ ಡಂಪ್ ಡೇ ಅಂದ್ರೆ ಏನು..? ವಿದೇಶದಲ್ಲಿ ಇದನ್ನೇಕೆ ಆಚರಿಸುತ್ತಾರೆ..?

Web Story: ವಿದೇಶದಲ್ಲಿ ಅದರಲ್ಲೂ ಅಮೆರಿಕದಲ್ಲಿ ಸ್ಪ್ರಿಂಗ್ ಡಂಪ್ ಡೇ ಅಂತಾ ಆಚರಿಸುತ್ತಾರೆ. ಹಾಗಂತ ಇದ್ಯಾವುದೋ ಹಬ್ಬ ಅಲ್ಲಾ. ಆದರೆ ಬೇಸಿಗೆ ಮುಗಿಯುವ ಸಮಯದಲ್ಲಿ ಇದನ್ನ ಆಚರಿಸಲಾಗತ್ತೆ. ಹಾಗಾದ್ರೆ ಏನಿದು ಸ್ಪ್ರಿಂಗ್ ಡಂಪ್ ಡೇ ಅಂತಾ ತಿಳಿಯೋಣ ಬನ್ನಿ..

ಬೇಸಿಗೆಯಲ್ಲಿ ಸ್ಪ್ರಿಂಗ್ ಡಂಪ್ ಡೇ ಅಂತಾ ಆಚರಿಸಲಾಗತ್ತೆ. ಅಮೆರಿಕದ ಪರ್ಟಿಕ್ಯೂಲರ್ ಏರಿಯಾದಲ್ಲಿ ಕೆಲವು ದಿನಗಳಲ್ಲಿ ಇದನ್ನು ಆಚರಿಸಲಾಗತ್ತೆ. ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಮನೆಯ ಆಚೆ ಚಂದವಾಗಿ ಜೋಡಿಸಿ ಇಡಬೇಕು.

ಅಗತ್ಯವಿದ್ದವರು, ಬಡವರು, ಮಧ್ಯಮ ವರ್ಗದವರು ಯಾರೇ ಆಗಲಿ, ಆ ಏರಿಯಾಗೆ, ಆ ದಿನ ಬಂದು, ತಮಗೆ ಬೇಕಾದ ವಸ್ತುಗಳನ್ನು ತೆಗೆದುಕ“ಂಡು ಹೋಗಬಹುದು. ನೀಡಿದ ಸಮಯದಲ್ಲಿ ಆ ವಸ್ತುಗಳನ್ನು ಅಲ್ಲಿಂದ ಯಾರೂ ತೆಗೆದುಕ“ಂಡು ಹೋಗದಿದ್ದಲ್ಲಿ, ಸರ್ಕಾರದ ಕಡೆಯವರು ಬಂದು, ಆ ವಸ್ತುಗಳನ್ನು ತಮ್ಮ ಗಾಡಿ ಹಾಕಿ ತೆಗೆದುಕ“ಂಡು ಹೋಗುತ್ತಾರೆ.

ಹಾಗಂತ, ಇಲ್ಲಿ ಜನ ಸಣ್ಣ ಪುಟ್ಟ ವಸ್ತುಗಳನ್ನ ಆಚೆ ಇಡುವುದಿಲ್ಲ. ಚೆನ್ನಾಗಿರುವ ಆದರೆ ಹಳೆಯದಾಗಿರುವ ಟೇಬರ್, ಕುರ್ಚಿ, ಸೈಕಲ್, ಮಕ್ಕಳ ಆಟಿಕೆ, ಸೋಫಾ ಸೆಟ್, ಪಾತ್ರೆ ಸಾಮಾನು ಹೀಗೆ ಬೆಲೆ ಬಾಳುವ ವಸ್ತುಗಳನ್ನೇ ಇಡುತ್ತಾರೆ.

ಏಕೆಂದರೆ, ಕೆಲವರು ಕೆಲವು ವರ್ಷಗಳಿಗೆ 1 ಬಾರಿ, ಮನೆಯನ್ನು ಕ್ಲೀನ್ ಮಾಡಿ, ಹೊಸ ಹೊಸ ಸೋಫಾ, ಕುರ್ಚಿ, ಡೈನಿಂಗ್ ಸೆಟ್, ಕ್ರಾಕರಿ ಸೆಟ್, ಹೀಗೆ ಎಲ್ಲವನ್ನೂ ತರುತ್ತಾರೆ. ಆಗ ಸ್ವಲ್ಪ ಹಳೆಯದಾದ ವಸ್ತುಗಳನ್ನು ದಾನ ಮಾಡುತ್ತಾರೆ. ಅಂಥವರಿಗಾಗಿ ಅಲ್ಲಿನ ಸರ್ಕಾರ ಸ್ಪ್ರಿಂಗ್ ಡಂಪ್ ಡೇ ಅಂತಾನೇ ಘೋಷಿಸಿದೆ.

ಹೇಳಿದ ದಿನಾಂಕದಂದು ಬೇಡದ ವಸ್ತುಗಳನ್ನು ಆಚೆ ಇಟ್ಟರಾಯಿತು. ಬೇಕಾದವರು ಅದನ್ನು ತೆಗೆದುಕ“ಳ್ಳುತ್ತಾರೆ. ಇಲ್ಲವಾದಲ್ಲಿ ಸರ್ಕಾರವೇ ಅದನ್ನು ತೆಗೆದುಕ“ಂಡು ಹೋಗುತ್ತದೆ.

About The Author