Health Tips: ತುಪ್ಪದ ಬಳಕೆ ಅದೆಷ್ಟು ಮುಖ್ಯವೆಂದರೆ, ಹಿಂದೂಗಳಲ್ಲಿ ದೇವರ ದೀಪ ಉರಿಸುವುದಕ್ಕೂ, ಹೋಮ ಹವನಕ್ಕೂ, ಪ್ರಸಾದ ತಯಾರಿಕೆಗೂ ತುಪ್ಪ ಬಳಸಲಾಗುತ್ತದೆ. ಅದೇ ರೀತಿ ನಾವು ಕೂಡ ಪ್ರತಿದಿನ ಒಂದದು ಸ್ಪೂನ್ ತುಪ್ಪದ ಸೇವನೆ ಮಾಡಲೇಬೇಕು. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಊಟವಾದ ಬಳಿಕ, ಮಲವಿಸರ್ಜನೆ ಮಾಡಿದ ಬಳಿಕ ಹೊಟ್ಟೆ ನೋವಾಗುತ್ತಿದೆ, ಗ್ಯಾಸ್ಟ್ರಿಕ್ ಸಮಸ್ಯೆಯಾಗುತ್ತಿದೆ ಎಂದಾದಲ್ಲಿ, ಪ್ರತಿದಿನ ತುಪ್ಪದ ಸೇವನೆ ಮಾಡಿ. ತುಪ್ಪ ಸೇವಿಸುವುದರಿಂದ ನಮಗಿರುವ ಯಾವುದೇ ಹೊಟ್ಟೆಯ ಸಮಸ್ಯೆ ಕಡಿಮೆಯಾಗುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಅಲ್ಲದೇ, ಮಲಬದ್ಧತೆ ಸಮಸ್ಯೆಯೂ ಉಂಟಾಗುವುದಿಲ್ಲ.
ಇನ್ನು ಗರ್ಭಿಣಿಯರಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ತುಪ್ಪವನ್ನು ಹೆಚ್ಚು ತಿನ್ನಲು ಕೊಡುತ್ತಾರೆ. ಏಕೆದಂರೆ, ತುಪ್ಪದ ಸೇವನೆಯಿಂದ ಮೂಳೆ ಗಟ್ಟಿಯಾಗುತ್ತದೆ. ಅಪಘಾತವಾದಾಗ ಮೂಳೆ ಮುರಿದಿದ್ದರೆ, ಬೇಗ ಚೇತರಿಸಿಕೊಳ್ಳಲು ತುಪ್ಪ ಸಹಕಾರಿಯಾಗಿದೆ. ಹಾಗಾಗಿ ಬಿಸಿ ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ, ತಿನ್ನಲು ಕೊಡಲಾಗುತ್ತದೆ.
ಇನ್ನು ಗರ್ಭಿಣಿಯರು ತುಪ್ಪ ಸೇವಿಸಿದರೆ, ಅವರ ಮೂಳೆಯ ಜೊತೆಗೆ, ಮಗುವಿನ ಮೂಳೆ ಕೂಡ ಗಟ್ಟಿಯಾಗುತ್ತದೆ. ಅಲ್ಲದೇ, ಮಗುವಿನ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಮಗುವಿನ ತ್ವಚೆ ಕೂಡ ಸುಂದರವಾಗುತ್ತದೆ. ಮಗು ಚೆಂದವಾಗಿ, ಬುದ್ಧಿವಂತವಾಗಿರಬೇಕು, ಚುರುಕಾಗಿರಬೇಕು ಅಂದ್ರೆ ಹಸವಿನ ತುಪ್ಪದ ಸೇವನೆ ಮಾಡಬೇಕು.
ಪ್ರತಿದಿನ ಶುದ್ಧ ಹಸುವಿನ ತುಪ್ಪದ ಸೇವನೆ ಮಾಡುವುದರಿಂದ, ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ತುಪ್ಪದಿಂದ ದೇಹಕ್ಕೆ ಮಸಾಜ್ ಮಾಡುವುದರಿಂದ ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ. ಬೆಳಗ್ಗಿನ ತಿಳಿ ಬಿಸಿಲಿರುವಾಗ, ಪುಟ್ಟ ಮಕ್ಕಳಿಗೆ ತುಪ್ಪದಿಂದ ಬಾಡಿ ಮಸಾಜ್ ಮಾಡಿ, ಆ ತಿಳಿ ಬಿಸಿಲಿಗೆ ಬಿಟ್ಟರೆ, ಮಕ್ಕಳ ಆರೋಗ್ಯ ಅಭಿವೃದ್ಧಿಯಾಗುವುದರ ಜೊತೆ, ತ್ವಚೆಯ ಬಣ್ಣ ತಿಳಿಯಾಗುತ್ತದೆ.
ಇನ್ನು ತುಪ್ಪವನ್ನು ಟಾಪಿಂಗ್ ರೀತಿ ಬಳಸಬೇಕು. ತುಪ್ಪವನ್ನು ಕಾಯಾಸಿ, ಬಿಸಿ ಮಾಡಿ, ಅದರಲ್ಲಿ ಅಡುಗೆ ತಯಾರಿಸಬಾರದು. ಅನ್ನದ ಮೇಲೆ, ಸಾರಿನ ಮೇಲೆ, ತಪಾತಿ ಮೇಲೆ ತುಪ್ಪ ಸವರಿ ಸೇವಿಸಬೇಕು. ಏಕೆಂದರೆ ತುಪ್ಪ ಹೆಚ್ಚು ಬಿಸಿ ಮಾಡಿದರೆ, ಅದರಲ್ಲಿರುವ ಪೋಷಕಾಂಶ ಹೊರಟುಹೋಗುತ್ತದೆ. ಇಂಥ ತುಪ್ಪ ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.