ನಾವು ಬಳಸುವ ವಸ್ತ್ರ, ಮಾಪ್, ಪಾತ್ರೆ ತಿಕ್ಕೋ ಬ್ರಶ್ ಇದೆಲ್ಲವೂ ನಮ್ಮ ಆರೋಗ್ಯ ಹಾಳು ಮಾಡಬಹುದು..

Tips: ನಾವು ಪ್ರತಿದಿನ ಕಸ ಗುಡಿಸಿ, ಮಾಪ್‌ನಿಂದ ಮನೆ ಕ್ಲೀನ್ ಮಾಡ್ತೀವಿ. ಅಡುಗೆ ಮನೆಯಲ್ಲಿ ಕ್ಲೀನ್ ಮಾಡೋಕ್ಕೂ ವಸ್ತ್ರ ಬಳಸುತ್ತೇವೆ. ಅಲ್ಲದೇ, ನಾವು ಪಾತ್ರೆ ಕ್ಲೀನ್ ಮಾಡೋಕ್ಕೆ, ಬ್ರಶ್ ಯ್ಯೂಸ್ ಮಾಡ್ತೀವಿ. ಆದ್ರೆ ಇದೆಲ್ಲವೂ ನಮ್ಮ ಮನೆ, ವಸ್ತ್ಪಗಳನ್ನು ಕ್ಲೀನ್ ಮಾಡುವುದರ ಜತೆಗೆ ನಮ್ಮ ಆರೋಗ್ಯವನ್ನೂ ಹಾಳು ಮಾಡಬಹುದು ಅಂದ್ರೆ ನೀವು ನಂಬ್ತೀರಾ..? ನೀವು ನಂಬಲೇಬೇಕು. ಹಾಗಾದ್ರೆ ಯಾವ ರೀತಿ ಇದನ್ನೆಲ್ಲ ಬಳಸಬೇಕು ಅಂತಾ ತಿಳಿಯೋಣ ಬನ್ನಿ..

ನಾವು ಕಿಚನ್ ಕ್ಲೀನ್ ಮಾಡಲು ಬಳಸುವ ವಸ್ತ್ರ, ಮಾಪ್ ಮತ್ತು ಪಾತ್ರೆ ಕ್ಲೀನ್ ಮಾಡುವ ಬ್ರಶ್‌ನ್ನು ಹೆಚ್ಚು ಸಮಯ ಬಳಸಬಾರದು. ಅದನ್ನು ಪದೇ ಪದೇ ಚೇಂಜ್ ಮಾಡುತ್ತಲೇ ಇರಬೇಕು. ನೀವು ಬಳಸುವ ಈ ವಸ್ತುವಿನ ಕ್ವಾಲಿಟಿ ಚೆನ್ನಾಗಿಯೇ ಇರಬಹುದು. ಆದರೆ ಅದನ್ನು ನಾವು ಕ್ಲೀನ್ ಮಾಡುವುದಕ್ಕಾಗಿ ಬಳಸುತ್ತೇವೆ. ಆ ಕಾರಣಕ್ಕೆ ಅದರಲ್ಲ ಗಲೀಜುಗಳು ತುಂಬಿರುತ್ತದೆ. ನೀವು ಎಷ್ಟೇ ಕ್ಲೀನ್ ಮಾಡಿದರೂ, ಅದರಲ್ಲಿ ಸ್ವಲ್ಪವಾದರೂ ಗಲೀಜು ಉಳಿಯುತ್ತದೆ. ಹಾಗಾಗಿ ಈ ವಸ್ತುಗಳನ್ನು ಆಗಾಗ ಚೇಂಜ್ ಮಾಡುತ್ತಿರಬೇಕು.

ಅಲ್ಲದೇ, ಇದನ್ನು ಬಳಸುವಾಗಲೂ ಮಾಪ್, ವಸ್ತ್ರ, ಬ್ರಶ್ ಮೂರನ್ನು ಬಿಸಿ ನೀರಿನಲ್ಲಿ ಅದ್ದಿಯೇ ಸ್ವಚ್ಛ ಮಾಡಬೇಕು. ಬಿಸಿ ನೀರಿನಿಂದ ಇದನ್ನು ಸ್ವಚ್ಛ ಮಾಡಿದ್ರೆ, ಅದರಲ್ಲಿರುವ ಕ್ರಿಮಿಗಳು ಸಾಯುತ್ತದೆ. ಆದರೆ ಹೆಚ್ಚು ಸಮಯ ಇದನ್ನು ಬಳಸುವುದು ಸೂಕ್ತವಲ್ಲ.

ಇನ್ನು ತರಕಾರಿ ಕತ್ತರಿಸಲು ಬೋರ್ಡ್ ಬಳಸುತ್ತಿದ್ದರೆ, ಅದನ್ನು ಚೆನ್ನಾಗಿ ಕ್ಲೀನ್ ಮಾಡಬೇಕು. ಪ್ರತಿದಿನ ಇದು ಅವಶ್ಯಕವಾಗಿ ಬೇಕಿರುವ ವಸ್ತುವಾಗಿದ್ದು, ಇದರಲ್ಲಿಯೂ ಕ್ರಿಮಿಗಳಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ಕ್ಲೀನ್ ಆಗಿರಿಸಿ. ಇಲ್ಲದಿದ್ದಲ್ಲಿ, ಆರೋಗ್ಯವಾಗಿಬೇಕಾದ ಆಹಾರಗಳು ಆರೋಗ್ಯ ಹಾಳು ಮಾಡುತ್ತದೆ.

About The Author