Health Tips: ಮುಖದಲ್ಲಿ ಒಂದು ಮೊಡವೆ ಇಲ್ಲದೇ, ಮುಖ ಕ್ಲೀನ್ ಆಗಿರಬೇಕು ಅನ್ನೋದು ಹಲವು ಯುವತಿಯರ ಆಸೆಯಾಗಿರುತ್ತದೆ. ಆದರೆ ದೇಹದಲ್ಲಾಗುವ ಹಾರ್ಮೋನಲ್ ಇಂಬ್ಯಾಲೆನ್ಸ್ ನಿಂದ ಮುಖದ ಮೇಲೆ ಮೊಡವೆಯಾಗುತ್ತದೆ. ಆದರೆ ನಾವು ನಮ್ಮ ಮುಖದ ಮೇಲೆ ಗುಳ್ಳೆಗಳಾಗಬಾರದು ಅಂದ್ರೆ ಏನು ಮಾಡಬೇಕು ಅಂತಾ ವೈದ್ಯರಾದ ಡಾ.ದೀಪಿಕಾ ಅವರೇ ಹೇಳಿದ್ದಾರೆ.
ಹೆಚ್ಚು ಜಂಕ್ ಫುಡ್ ಸೇವಿಸಿದಾಗ, ಎಣ್ಣೆ ತಿಂಡಿ, ಸಿಹಿ ಪದಾರ್ಥ ತಿಂದಾಗ, ಚಾಕೋಲೇಟ್ಸ್ ತಿಂದಾಗ ಮುಖದ ಮೇಲೆ ಮೊಡವೆಯಾಗುತ್ತದೆ. ಎರಡನಯೇದಾಗಿ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆದಾಗ ಮುಖದಲ್ಲಿ ಮೊಡವೆಯಾಗುತ್ತದೆ. ಹೀಗೆ ಅನೇಕ ಕಾರಣಗಳಿಂದ ಮುಖದ ಮೇಲೆ ಮೊಡವೆಗಳಾಗುತ್ತದೆ.
ಹೀಗಿದ್ದಾಗ, ವೈದ್ಯರ ಅಡ್ವೈಸ್ ತೆಗೆದುಕೊಳ್ಳುವುದು ಮುಖ್ಯ ಅಂತಾರೆ ವೈದ್ಯರಾದ ಡಾ.ದೀಪಿಕಾ. ಈ ಸಮಸ್ಯೆಗಾಗಿ ಫೇಸ್‌ವಾಶ್, ಕ್ರೀಮ್ ಹೀಗೆ ಬೇರೆ ಬೇರೆ ಸ್ಕಿನ್‌ಗೆ ಮ್ಯಾಚ್ ಆಗುವಂಥ ಪರಿಹಾರವನ್ನು ಕೊಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.