Wednesday, December 18, 2024

Latest Posts

Health Tips: ಮುಟ್ಟಿನ ಹೊಟ್ಟೆನೋವು ನಿವಾರಣೆಗೆ ಈ ಉಪಾಯಗಳನ್ನು ಅನುಸರಿಸಿ

- Advertisement -

Health Tips: ಹಲವು ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯ ಬಂತು ಅಂದ್ರೆ, ಅದೇನೋ ಗೊಂದಲ, ಆತಂಕ. ಇದಕ್ಕೆ ಕಾರಣ, ಆ ಸಮಯದಲ್ಲಿ ಬರುವ ನರಕದಂಥ ಹೊಟ್ಟೆ ನೋವು. ಹಾಗಾಗಿ ನಾವಿಂದು ಹೊಟ್ಟೆ ನೋವಿನ ಸಮಸ್ಯೆಗೆ ಯಾವ ರೀತಿಯಾಗಿ ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ.

ಶುಂಠಿ, ತುಳಸಿ ಚಹಾ: ಕೊಂಚ ಶುಂಠಿ ಮತ್ತು ಕೊಂಚ ತುಳಸಿಯನ್ನು 1 ಗ್ಲಾಸ್ ನೀರಿಗೆ ಹಾಕಿ ಕುದಿಸಿ,ಕಶಾಯ ತಯಾರಿಸಿಕೊಳ್ಳಿ. ಬಳಿಕ ಮುಟ್ಟಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಬಿಸಿ ನೀರಿನ ಶಾಖ: ಹೊಟ್ಟೆ ನೋವು ಶುರುವಾದಾಗ, ಹೊಟ್ಟೆಗೆ ಬಿಸಿ ನೀರಿನ ಶಾಖ ಕೊಡಬೇಕು. ಇದಕ್ಕೂ ಮುನ್ನ ಹೊಕ್ಕಳಿಗೆ ಹರಳೆಣ್ಣೆ ಹಚ್ಚಬೇಕು. ಬಳಿಕ ಬಿಸಿ ನೀರಿನ ಶಾಖ ಕೊಡಬೇಕು. ಆಗ ಹೊಟ್ಟೆ ನೋವು ಕ್ರಮೇಣ ಕಡಿಮೆಯಾಗುತ್ತದೆ.

ವೋಮ ಮತ್ತು ಬೆಲ್ಲದ ಮಿಶ್ರಣ: ಕೊಂಚ ವೋಮ ಮತ್ತು ಕೊಂಚ ಬೆಲ್ಲವನ್ನು ನೀರಗೆ ಹಾಕಿ, ಚೆನ್ನಾಗಿ ಕುದಿಸಿ, ಕಶಾಯ ತಯಾರಿಸಿ. ಕುಡಿಯಿರಿ. ಇದು ಕೂಡ ಮುಟ್ಟಿನ ಹೊಟ್ಟೆ ನೋವಿಗೆ ರಾಮಬಾಣ.

ಸೋಂಪಿನ ಕಶಾಯ: ಒಂದು ಸ್ಪೂನ್ ಸೋಂಪನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಅರ್ಧ ಗ್ಲಾಸ್ ಆಗುವಂತೆ ಮಾಡಿ. ಈಗ ಈ ಕಶಾಯವನ್ನು ಸ್ವಲ್ಪ ತಣಿಸಿ ಕುಡಿಯಿರಿ. ಇದರಿಂದ ಬೇಗ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ನಿಂಬೆಹಣ್ಣಿನ ಜ್ಯೂಸ್: ಮುಟ್ಟಿನ ಹೊಟ್ಟೆ ನೋವಾಗುವ ಸಮಯದಲ್ಲಿ ನಿಂಬೆಹಣ್ಣಿನ ಜ್ಯೂಸ್ ಕುಡಿಯುತ್ತಲಿರಿ. ಇದು ಹೊಟ್ಟೆ ನೋವು ಶಮನ ಮಾಡುವುದಲ್ಲದೇ, ನಿಮ್ಮ ದೇಹಕ್ಕೆ ಶಕ್ತಿ ಕೊಡುತ್ತದೆ.

ತಂಪಾದ ಆಹಾರ, ಉತ್ತಮ ನಿದ್ದೆ: ಇಂಥ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಹಾಾಗಾಗಿ ನಿದ್ದೆ ಮಾಡಿ, ತಂಪಾದ ಆಹಾರವನ್ನೇ ಹೆಚ್ಚು ಸೇವಿಸಿ, ಜಂಕ್‌ ಫುಡ್, ಮಸಾಲೆಯುಕ್ತ ಪದಾರ್ಥ ಸೇವನೆಯಿಂದ ದೂರವಿರಿ. ಹೆಚ್ಚು ನೀರು ಕುಡಿಯಿರಿ.

- Advertisement -

Latest Posts

Don't Miss